ಮುಂದಿನ ನಿಲ್ದಾಣ, ರಾಧಿಕಾ ನಾರಾಯಣ್, ಪ್ರವೀಣ್ ತೇಜ್ ಮತ್ತು ಅನನ್ಯ ಕಶ್ಯಪ್ ಅಭಿನಯದ ಸಿನಿಮಾ. ಸಿನಿಮಾದಲ್ಲಿ ಮೂರು ಪ್ರಧಾನ ಪಾತ್ರಗಳಿವೆ. ಪಾರ್ಥ.. ಮೀರಾ.. ಅಹನಾ.. ಮೂವರೂ ಲೈಫ್ ನೋಡುವ ರೀತಿಯೇ ಬೇರೆ. ಹೀಗೆ ಮೂರು ದೃಷ್ಟಿಕೋನದವರ ಲೈಫ್ ಜರ್ನಿಯೇ ಮುಂದಿನ ನಿಲ್ದಾಣ.
ಅಲ್ಲಿ ಪ್ರೀತಿ, ಆಕರ್ಷಣೆ, ತುಂಟಾಟ, ಗಾಂಭೀರ್ಯ, ನವಿರಾದ ಪೋಲಿತನ, ಕಾಮ ಎಲ್ಲವೂ ಇದೆ. ಅದೆಲ್ಲದರ ನಡುವೆಯೂ ಅವರು ತಲುಪುವ ಮುಂದಿನ ನಿಲ್ದಾಣ ಯಾವುದು ಎನ್ನುವುದೇ ಚಿತ್ರದ ಕುತೂಹಲ.
ವಿನಯ್ ಭಾರದ್ವಾಜ್ ನಿರ್ದೇಶನದ ಚಿತ್ರಕ್ಕೆ ಎ.ಆರ್.ರೆಹಮಾನ್ ಅವರ ಶಿಷ್ಯ ಜಿಮ್ ಸತ್ಯ ಅವರ ಸಂಗೀತವಿದೆ. ನವೆಂಬರ್ ಕೊನೆಯ ವಾರ ಚಿತ್ರ ರಿಲೀಸ್ ಆಗುತ್ತಿದೆ.