` ಕಾಳಿದಾಸನ ಕಥೆ ಹುಟ್ಟಿದ್ದೇ ಆ ಯುವಕನ ಆತ್ಮಹತ್ಯೆಯಿಂದ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
kaalidasa kannada mestru is an inspiraton from a real life incident
Kaalidasa Kannada Mestru Movie Image

ಕಥೆಗಳು ಎಲ್ಲಿ ಬೇಕಾದರೂ ಹುಟ್ಟಬಹುದು. ಸಣ್ಣದೊಂದು ಕ್ಷಣದಲ್ಲಿ ಒನ್ ಲೈನ್ ಎಳೆ ಕಣ್ಣೆದುರು ಬಂದು ನಿಲ್ಲಬಹುದು. ಕಾಳಿದಾಸ ಕನ್ನಡ ಮೇಷ್ಟ್ರು ಚಿತ್ರದ ಕಥೆಯೂ ಹಾಗೆಯೇ.. ಶಿಕ್ಷಣ ವ್ಯವಸ್ಥೆ, ಸಂಸಾರ, ಕನ್ನಡ ಮೇಷ್ಟ್ರು, ಗಠವಾಣಿ ಹೆಂಡತಿ, ಹುಡುಗಾಟದ ಮಕ್ಕಳು.. ಇವೆಲ್ಲವನ್ನು ಇಟ್ಟುಕೊಂಡು ಒಂದು ಮನರಂಜನಾತ್ಮಕ ಚಿತ್ರ ಕಟ್ಟಿದ್ದಾರೆ ಕವಿರಾಜ್.

ಈ ಕಥೆ ಹುಟ್ಟಲು ಕಾರಣ ಒಬ್ಬ ಯುವಕನ ಆತ್ಮಹತ್ಯೆ ಮತ್ತು ಆತ ಸಾವಿಗೆ ಮುನ್ನ ಬರೆದಿಟ್ಟಿದ್ದ ಒಂದು ಪತ್ರ ಎಂದರೆ ಅಚ್ಚರಿಯಾದೀತು. ಆದರೆ, ಇದು ಸತ್ಯ. ದುಬೈನಲ್ಲಿದ್ದ ಭಾರತೀಯ ಮೂಲದ ಯುವಕನೊಬ್ಬ ಓದುವ ಒತ್ತಡ ತಡೆದುಕೊಳ್ಳಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಪತ್ರ ಬರೆದಿಟ್ಟಿದ್ದ. ಆ ಸುದ್ದಿಯನ್ನು ಓದುವಾಗ ಶಿಕ್ಷಣ ವ್ಯವಸ್ಥೆ ಇಷ್ಟೊಂದು ಒತ್ತಡ ಸೃಷ್ಟಿಸುತ್ತಾ ಎಂದು ಅನಿಸಿಬಿಟ್ಟಿತು. ಆ ಘಟನೆಯೇ ಕಾಳಿದಾಸ ಕನ್ನಡ ಮೇಷ್ಟ್ರುಗೆ ಪ್ರೇರಣೆ ಎಂದಿದ್ದಾರೆ ಕವಿರಾಜ್.

ಜಗ್ಗೇಶ್ ಇದ್ದಾರೆ ಎಂದಮೇಲೆ ತರಲೆ, ತಮಾಷೆ, ತುಂಟಾಟ ಇರಲೇಬೇಕು. ಅವೆಲ್ಲವನ್ನೂ ಇಟ್ಟುಕೊಂಡೇ ಕಾಳಿದಾಸ ಕನ್ನಡ ಮೇಷ್ಟ್ರು ಕಥೆ ಸಿದ್ಧಪಡಿಸಿದೆವು. ಜಗ್ಗೇಶ್ ಅವರ ಇನ್ಪುಟ್ಸ್ ಕೂಡಾ ಚೆನ್ನಾಗಿತ್ತು ಎಂದಿದ್ದಾರೆ ಕವಿರಾಜ್. ಉದಯ್ ಕುಮಾರ್ ನಿರ್ಮಾಣದ ಚಿತ್ರದಲ್ಲಿ ಜಗ್ಗೇಶ್ ಕನ್ನಡ ಮೇಷ್ಟ್ರು. ಅವರ ಪತ್ನಿ ಕಾಳಿಯಾಗಿ ನಟಿಸಿರುವುದು ಮೇಘನಾ ಗಾಂವ್ಕರ್. ಹೆಂಡತಿಗೆ ಹೆದರುವ ಅಮಾಯಕ.. ಮುಗ್ಧ.. ಪಾಪದ ಮೇಷ್ಟ್ರು ಜಗ್ಗೇಶ್.

India Vs England Pressmeet Gallery

Odeya Audio Launch Gallery