ಮುಂದಿನ ನಿಲ್ದಾಣ ಚಿತ್ರಕ್ಕೆ ಬಿಡುಗಡೆಗೂ ಮೊದಲೇ ಬಹುಮಾನ ಸಿಕ್ಕಿದೆ. ಜಗದ್ವಿಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಚಿತ್ರದ ಹಾಡುಗಳಿಗೆ ಶಹಬ್ಬಾಸ್ ಹೇಳಿದ್ದಾರೆ. ಮುಂದಿನ ನಿಲ್ದಾಣ ಚಿತ್ರದ ನಗುವ ಕಲಿಸು ಹಾಡನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಆಲ್ ದಿ ಬೆಸ್ಟ್ ಹೇಳಿದ್ದಾರೆ.
ಅಂದಹಾಗೆ ಮುಂದಿನ ನಿಲ್ದಾಣ ಚಿತ್ರದ ಸಂಗೀತ ನಿರ್ದೇಶಕ ಜಿಮ್ ಸತ್ಯ, ರೆಹಮಾನ್ ಅವರ ಶಿಷ್ಯ. ಶಿಷ್ಯನ ಮೊದಲ ಪ್ರಯತ್ನವನ್ನು ರೆಹಮಾನ್ ಮೆಚ್ಚಿಕೊಂಡಿದ್ದಾರೆ. ಪ್ರವೀಣ್ ತೇಜ, ರಾಧಿಕಾ ನಾರಾಯಣ್, ಅನನ್ಯಾ ಕಶ್ಯಪ್ ನಟಿಸುರುವ ಚಿತ್ರಕ್ಕೆ ವಿನಯ್ ನಿರ್ದೇಶಕ.