ಸೌಥ್ ಇಂಡಿಯಾ ಕ್ರಶ್ ಎನಿಸಿಕೊಂಡಿರುವ ರಶ್ಮಿಕಾ ಮಂದಣ್ಣ, ಸದಾ ಫಿಟ್ & ಫೈನ್. ಆಗಾಗ್ಗೆ ರಶ್ಮಿಕಾ ಮಂದಣ್ಣ ವರ್ಕೌಟ್ ಮಾಡ್ತಿರೋ ವಿಡಿಯೋಗಳು ಭರ್ಜರಿ ಸದ್ದು ಮಾಡೋದಿದೆ. ಈಗಲೂ ಅಷ್ಟೆ, ಜಿಮ್‌ನಲ್ಲಿ ಬೆವರು ಸುರಿಸುತ್ತಿರುವ ವಿಡಿಯೋಗಳು ವೈರಲ್ ಆಗಿವೆ. ಹೀಗಾಗಿಯೇ ರಶ್ಮಿಕಾ ಸದಾ ಫಿಟ್ & ಫೈನ್. ಎಕ್ಸ್ಟ್ರಾ ಕೊಬ್ಬು ಇಲ್ಲದ ಸಪೂರ ದೇಹದ ಬೆಡಗಿಯಾಗಿಯೇ ಉಳಿದಿದ್ದಾರೆ ರಶ್ಮಿಕಾ.
ಏನಿದು ಫಿಟ್‌ನೆಸ್ ಸೀಕ್ರೆಟ್ ಎಂದರೆ ರಶ್ಮಿಕಾ ಹೇಳೋದು ಅವರ ತಂದೆ ಮಂದಣ್ಣ ಅವರ ಬಗ್ಗೆ. `ನನಗೆ ಚಿಕ್ಕಂದಿನಲ್ಲೇ ನಮ್ಮಪ್ಪ ಫಿಟ್ ನೆಸ್ ಬಗ್ಗೆ ಹೇಳಿಕೊಟ್ಟರು. ನಾನು ಚಿತ್ರರಂಗಕ್ಕೇ ಬಂದಿರಲಿಲ್ಲ. ಆಗಲೇ ಅಪ್ಪ ವರ್ಕೌಟ್ ಮಾಡುವಂತೆ ಹೇಳುತ್ತಿದ್ದರು. ಹೆಣ್ಣು ಮಕ್ಕಳು ಗಂಡು ಮಕ್ಕಳಿಗಿಂತ ಯಾವುದರಲ್ಲೂ ಕಡಿಮೆ ಇರಬಾರದು ಎನ್ನುತ್ತಿದ್ದರು. ವರ್ಕೌಟ್ ಮಾಡಿದರೆ ನೆಗೆಟಿವ್ ಆಲೋಚನೆ ದೂರವಾಗುತ್ತದೆ'' ಎಂದಿದ್ದಾರೆ ರಶ್ಮಿಕಾ ಮಂದಣ್ಣ.