ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ತಮ್ಮ ಬ್ಯಾನರ್‌ನಲ್ಲಿ ವಿಭಿನ್ನ ಪ್ರಯೋಗಾತ್ಮಕ ಚಿತ್ರಗಳ ನಿರ್ಮಾಣಕ್ಕಿಳಿದಿದ್ದಾರೆ. ಮೊದಲ ಪ್ರಯತ್ನ ಕವಲುದಾರಿಯಲ್ಲಿ ಕಮರ್ಷಿಯಲ್ ಆಗಿಯೂ ಸಕ್ಸಸ್ ಕಂಡಿದ್ದ ಪುನೀತ್, ಈಗ ಮಾಯಾಬಜಾರ್ ಚಿತ್ರದ ಟೀಸರ್ ಹೊರತಂದಿದ್ದಾರೆ. ದುಬೈನಲ್ಲಿ ಮಾಯಾ ಬಜಾರ್ ಟೀಸರ್ ರಿಲೀಸ್ ಆಗಿದೆ.
ರಾಜ್ ಬಿ.ಶೆಟ್ಟಿ, ವಸಿಷ್ಠ ಸಿಂಹ, ಸುಧಾರಾಣಿ, ಪ್ರಕಾಶ್ ರೈ, ಅಚ್ಯುತ್ ಕುಮಾರ್, ಸಾಧು ಕೋಕಿಲ, ಚೈತ್ರಾ ರಾವ್ ನಟಿಸಿರುವ ಚಿತ್ರದ ಟೀಸರ್‌ಲ್ಲಿರೋದು ಮೋದಿ ನೋಟ್ ಬ್ಯಾನ್ ಅವಧಿಯಲ್ಲಿ ಮಾಡಿದ್ದ ಸ್ಟೇಟ್‌ಮೆಂಟ್‌ನ ಬ್ಯಾಕ್‌ಗ್ರೌಂಡ್ ವಾಯ್ಸ್. ಹಾಗಾದರೆ.. ಚಿತ್ರದ ಕಥೆಯಲ್ಲಿರೋದು.. ದಟ್ ಈಸ್ ಸಸ್ಪೆನ್ಸ್.
ರಾಧಾಕೃಷ್ಣ ಚಿತ್ರದ ನಿರ್ದೇಶಕ. ಮೂಲತಃ ಸಿವಿಲ್ ಎಂಜಿನಿಯರ್ ಆಗಿರುವ ರಾಧಾಕೃಷ್ಣಗೆ ಇದು ಮೊದಲ ಪ್ರಯತ್ನ. ರಾಜ್ ಬಿ.ಶೆಟ್ಟಿ ಮಹತ್ವಾಕಾಂಕ್ಷೆಯಿರುವ ಹುಡುಗನಾಗಿ ನಟಿಸಿದ್ದರೆ, ವಸಿಷ್ಠ ಕಾಮಿಡಿ ರೋಲ್ ಮಾಡಿದ್ದಾರಂತೆ. ಫಸ್ಟ್ ಟೈಂ. ಟೀಸರ್ ಗಮನ ಸೆಳೆದಿದೆ.