` ಕನ್ನಡ ಕವನ ವಾಚನ ಈಗ ಹೆಮ್ಮೆಯ ಸಂಗತಿ : ಅನಿಲ್ ಕುಂಬ್ಳೆ ಸವಾಲು ಯಾರಿಗೆ ಗೊತ್ತೇ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
kannada poetry challenge goes higher
Kannada Poetry Challenge

ತಾವೂ ಒಂದು ಕನ್ನಡ ಕವನ ಓದಬೇಕು, ಮತ್ತೆ ಮೂವರು ಕನ್ನಡ ಕವನ ಓದುವಂತೆ ಮಾಡಬೇಕು. ಇದು ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ವಿಶೇಷ ಚಾಲೆಂಜ್. ಕನ್ನಡ ಸಾಹಿತ್ಯ ಅಕಾಡೆಮಿಯ ಬಿ.ವಿ. ವಸಂತ್ ಕುಮಾರ್ ಅವರಿಂದ ಆರಂಭವಾದ ಈ ಅಭಿಯಾನ.. ಈಗ ಇನ್ನೊಂದು ಮಜಲು ತಲುಪಿದೆ. ಏಕೆಂದರೆ ಈಗ ಈ ಅಭಿಯಾನಕ್ಕೆ ಜೊತೆಯಾಗಿರುವುದು ಅನಿಲ್ ಕುಂಬ್ಳೆ.

ಅನಿಲ್ ಕುಂಬ್ಳೆ ಅವರಿಗೆ ಕನ್ನಡ ಕವನದ ಚಾಲೆಂಜ್ ಮಾಡಿದ್ದವರು ಗೋಲ್ಡನ್ ಸ್ಟಾರ್ ಗಣೇಶ್. ಈಗ ಅನಿಲ್ ಕುಂಬ್ಳೆ ಕುವೆಂಪು ಅವರ `ಎಲ್ಲಾದರು ಇರು.. ಎಂಥಾದರು ಇರು.. ಕವನ ವಾಚಿಸಿದ್ದಾರೆ. ನಂತರ ಕಿಚ್ಚ ಸುದೀಪ್, ಪುನೀತ್ ರಾಜ್‌ಕುಮಾರ್ ಹಾಗೂ ಗಾಯಕ ವಿಜಯ್ ಪ್ರಕಾಶ್ ಅವರಿಗೆ ದಾಟಿಸಿದ್ದಾರೆ. ಕಿಚ್ಚ ಸುದೀಪ್ ಶೀಘ್ರದಲ್ಲೇ ಕವನ ವಾಚಿಸುವುದಾಗಿ ಹೇಳಿದ್ದಾರೆ. ಕವನ ಚಾಲೆಂಜ್ ಮುಂದುವರಿಯುತ್ತಿದೆ..

ಅAದಹಾಗೆ ಈಗಾಗಲೇ ಈ ಅಭಿಯಾನದಲ್ಲಿ ಚಿತ್ರರಂಗದಲ್ಲಿ ಯಶ್, ಚಿಕ್ಕಣ್ಣ, ರವಿಶಂಕರ್ ಗೌಡ.. ಪತ್ರಕರ್ತರಲ್ಲಿ ಜೋಗಿ, ವಿಶ್ವೇಶ್ವರ್ ಭಟ್, ನಾಡಿನ ಹಿರಿಯ ಚೇತನ ಪೆಜಾವರ ಶ್ರೀಗಳು ಮೊದಲಾದವರು ಭಾಗಿಯಾಗಿದ್ದಾರೆ. ಕನ್ನಡ ಕವನ ವಾಚನ ಎನ್ನುವುದು ಈಗ ಹೆಮ್ಮೆಯ ಸಂಗತಿಯಾಗುತ್ತಿದೆ.

India Vs England Pressmeet Gallery

Odeya Audio Launch Gallery