ಆಯುಷ್ಮಾನ್ ಭವ ರಿಲೀಸ್ ಆಗಿದೆ. ಚಿತ್ರದಲ್ಲಿ ಗಮನ ಸೆಳೆದಿರುವ ಬಹುತೇಕ ಅಂಶಗಳಲ್ಲಿ ಗ್ರಾಫಿಕ್ಸ್ ಕೂಡಾ ಒಂದು. ಈ ಬಗ್ಗೆ ಕೇಳಿದರೆ ಶಿವಣ್ಣ ಕೂಡಾ ಥ್ರಿಲ್ಲಾಗುತ್ತಾರೆ. `ಹೌದು, ಗ್ರಾಫಿಕ್ಸ್ ಚೆನ್ನಾಗಿ ಬಂದಿದೆ. ಈಗ ಟೆಕ್ನಾಲಜಿಯೂ ಮುಂದುವರಿದಿರೋದ್ರಿAದ ಅದು ಸ್ಕಿçÃನ್ ಮೇಲೆ ಚೆನ್ನಾಗಿ ಕಾಣ್ತಿದೆ' ಎಂದಿದ್ದಾರೆ ಶಿವಣ್ಣ. ಆದರೆ, ಈ ವೇಳೆ ಶಿವಣ್ಣ ಹಳಬರನ್ನು ಅದರಲ್ಲೂ ಆಗಿನ ಕಾಲದ ಛಾಯಾಗ್ರಹಕರು ಬೆಸ್ಟ್ ಎನ್ನುವುದನ್ನು ಪದೇ ಪದೇ ನೆನಪಿಸಿಕೊಂಡರು.
ಆಗ ಯಾವ ಟೆಕ್ನಾಲಜಿಯೂ ಇರಲಿಲ್ಲ. ಈಗ ಬಿಡಿ, ಗ್ರೀನ್ ಮ್ಯಾಟ್ ಮುಂದೆ ಏನೆಲ್ಲವನ್ನೂ ಸೃಷ್ಟಿಸಿಬಿಡ್ತಾರೆ. ಆದರೆ, ಶಂಕರ್ ಗುರು ಸಿನಿಮಾದಲ್ಲಿ ರಾಜ್ ಮೇಲೆ ರಾಜ್ ಕುಳಿತಂತೆ ಶಾಟ್ ತೆಗೆದಿದ್ದರು. ನೋ ಗ್ರಾಫಿಕ್ಸ್. ಮುತ್ತಣ್ಣ ಚಿತ್ರದಲ್ಲಿ ಡಬಲ್ ಆಕ್ಟ್ ಮಾಡುವಾಗಲೂ ಅಷ್ಟೆ, ಯಾವ ಟೆಕ್ನಾಲಜಿಯೂ ಇರಲಿಲ್ಲ. ಅಂಥಹ ತಂತ್ರಜ್ಞರ ಜೊತೆ ಕೆಲಸ ಮಾಡಿದ್ದೇನೆ ಎನ್ನುವುದೇ ನನ್ನ ಪುಣ್ಯ ಎಂದಿದ್ದಾರೆ ಶಿವರಾಜ್ ಕುಮಾರ್.
ಶಿವಣ್ಣ ಜೊತೆ ರಚಿತಾ ರಾಮ್ ನಾಯಕಿಯಾಗಿ ನಟಿಸಿದ್ದು, ಅನಂತ್ ನಾಗ್, ಸುಹಾಸಿನಿ, ನಿಧಿ ಸುಬ್ಬಯ್ಯ ಇತರೆ ಪ್ರಧಾನ ಪಾತ್ರಗಳಲ್ಲಿದ್ದಾರೆ. ಯೋಗಿ ದ್ವಾರಕೀಶ್ ನಿರ್ಮಾಣದ ಚಿತ್ರಕ್ಕೆ ಪಿ.ವಾಸು ನಿರ್ದೇಶಕ. ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲೊಂದು ಆಯುಷ್ಮಾನ್ ಭವ.