ಪ್ರೇಮಲೋಕ ಕನ್ನಡ ಚಿತ್ರರಂಗಕ್ಕಷ್ಟೇ ಅಲ್ಲ, ಭಾರತೀಯ ಚಿತ್ರರಂಗಕ್ಕೇ ಹಿತವಾದ ಶಾಕ್ ಕೊಟ್ಟ ಸಿನಿಮಾ. ಟ್ರೆಂಡ್ ಸೆಟ್ಟರ್. ಈಗ ಆ ಚಿತ್ರದ ಸೀಕ್ವೆಲ್ ಮಾಡೋಕೆ ಮುಂದಾಗಿದ್ದಾರೆ. ಅದೇ ರವಿಚಂದ್ರನ್. ಬರೋಬ್ಬರಿ ೩೨ ವರ್ಷಗಳ ನಂತರ.
ರವಿ ಜೊತೆ ಆಗ ಜ್ಯೂಲಿ (ಜೂಹಿ ಚಾವ್ಲಾ) ಇದ್ದರು. ಇನ್ನು ರವಿಚಂದ್ರನ್‌ಗೆ ಬೂಸ್ಟ್ ಕೊಟ್ಟು ಪುಟ್ಟ ಪುಟ್ಟ ಪಾತ್ರಗಳಲ್ಲಿ ಅತಿಥಿ ನಟರಾಗಿ ನಟಿಸಿದ್ದ ವಿಷ್ಣು, ಅಂಬಿ, ಪ್ರಭಾಕರ್ ಮೂವರೂ ಈಗಿಲ್ಲ.
ಪ್ರೇಮಲೋಕ-೨ನಲ್ಲಿ ರವಿಚಂದ್ರನ್ ಮಕ್ಕಳಿರುತ್ತಾರಂತೆ. ಮನೋರಂಜನ್ ಮತ್ತು ವಿಕ್ರಂ ಇಬ್ಬರೂ ನಟಿಸಲಿದ್ದಾರಂತೆ. ಸುಮಾರು ೨೦ ವರ್ಷಗಳ ಹಿಂದೆ ಹೊಳೆದಿದ್ದ ಕಥೆ. ಇತ್ತೀಚೆಗೆ ಮಗಳ ಬರ್ತ್ ಡೇ ದಿನ ಒಂದೊಳ್ಳೇ ಶೇಪಿಗೆ ಬಂತು. ಸ್ಸೋ.. ಮಕ್ಕಳ ಚಿತ್ರ ನಿರ್ದೇಶನಕ್ಕೆ ಮುಂದಾಗಿದ್ದೇನೆ ಎಂದಿದ್ದಾರೆ ರವಿಚಂದ್ರನ್.