Print 
jaggesh kaalidasa kannada mestru,

User Rating: 0 / 5

Star inactiveStar inactiveStar inactiveStar inactiveStar inactive
 
19 heroines featured in kaalidasa kannada mestru
Kaalidasa Kannada Mestru Movie Image

ಒಂದು ಚಿತ್ರ.. ೧೯  ಸುರಸುಂದರಿಯರು.. ಕನ್ನಡ ಚಿತ್ರರಂಗದ ಚೆಲುವೆಯರೆಲ್ಲ ಇಲ್ಲೇ ಇದ್ದರೂ, ಜಗ್ಗೇಶ್ ಅವರಿಗೆ ಬೇಜಾರೋ ಬೇಜಾರು. ಹಾಡು ಅವರ ಜೊತೆಯಲ್ಲಿಲ್ಲ. ಇದು ಕಾಳಿದಾಸ ಕನ್ನಡ ಮೇಷ್ಟುç ಕಥೆ. ಚಿತ್ರದ ನಾಯಕಿ ಮೇಘನಾ ಗಾಂವ್ಕರ್ ಪ್ರಧಾನವಾಗಿರೋ ಹಾಡಿನಲ್ಲಿ ರಚಿತಾ ರಾಮ್, ಹರಿಪ್ರಿಯಾ, ಅನುಪಮಾ ಗೌಡ, ಕೃಷಿ ತಾಪಂಡ, ಹರ್ಷಿಕಾ ಪೂಣಚ್ಚ, ಆದಿತಿ ಪ್ರಭುದೇವ, ವೈಭವಿ, ವೈನಿಧಿ, ವೈಸಿರಿ, ಕಾರುಣ್ಯ ರಾಮ್, ನಿಶ್ವಿಕಾ ನಾಯ್ಡು, ಸೋನು ಗೌಡ, ಸಂಯುಕ್ತ ಹೊರನಾಡು,  ಸಿಂಧು ಲೋಕನಾಥ್, ಶುಭಾ ಪೂಂಜಾ, ರೂಪಿಕಾ, ದಿವ್ಯಾ ಉರುಡಗ, ದಿಶಾ ಪೂವಯ್ಯ... ಮಕ್ಕಳಾಗಿದ್ದಾರೆ.

ಮಕ್ಕಳಂತೆ ಮಕ್ಕಳ ಕಷ್ಟವನ್ನ ಹೇಳಿಕೊಂಡಿದ್ದಾರೆ. ಮಕ್ಕಳಾಗಿ ಹುಟ್ಟಬಾರದಂತೆ.. ಹುಟ್ಟಿದರೂ ಶಾಲೆಗೆ ಹೋಗಬಾರದಂತೆ.. ಯಾಕೆ.. ಏನು.. ಅನ್ನೋದನ್ನ ಹಾಡು ನೋಡಿಯೇ ಅರ್ಥ ಮಾಡಿಕೊಳ್ಳಿ.

ಹಾಡಿನ ಪರಿಕಲ್ಪನೆ ಮತ್ತು ಸೊಗಸಾಗಿದೆ. ಇದೆಲ್ಲವೂ ನಿರ್ದೇಸಕ ಕವಿರಾಜ್ ಅವರದ್ದು. ಗುರುಕಿರಣ್ ಸಂಗೀತವಿದೆ.

ಉದಯ್ ಕುಮಾರ್ ನಿರ್ಮಾಣದ ಚಿತ್ರದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಮುಖಾಮುಖಿಯಾಗುತ್ತವೆ. ಕನ್ನಡ ಮೇಷ್ಟಾçಗಿ ಜಗ್ಗೇಶ್, ಜಗ್ಗೇಶ್ ಪತ್ನಿ, ಇಂಗ್ಲಿಷ್ ಮೋಹಿಯಾಗಿ ಮೇಘನಾ ಗಾಂವ್ಕರ್ ನಟಿಸಿದ್ದಾರೆ. ಚಿತ್ರ ಮುಂದಿನ ವಾರ ರಿಲೀಸ್ ಆಗುತ್ತಿದೆ.