ಸುಹಾಸಿನಿ, ಭಾರತೀಯ ಚಿತ್ರರಂಗದ ಅಭಿಜಾತ ಕಲಾವಿದೆಯರಲ್ಲಿ ಒಬ್ಬರು. ಕಮಲ್ ಹಾಸನ್, ಭಾರತೀಯ ಚಿತ್ರರಂಗಕ್ಕೆ ಮೆಥಡ್ ಆ್ಯಕ್ಟಿಂಗ್ ಪರಿಚಯಿಸಿದ ಧೀಮಂತ. ಇಂತಹ ಕಮಲ್ ಹಾಸನ್ ಕಾಲಿಗೆ ಬಹಿರಂಗ ವೇದಿಕೆಯಲ್ಲಿ ನಟಿ ಸುಹಾಸಿನಿ ಕಾಲಿಗೆ ಬಿದ್ದು ನಮಸ್ಕರಿಸುತ್ತಾರೆ ಎಂದರೆ.. ಏನಿರಬಹುದು ವಿಶೇಷ.
ಇಲ್ಲಿ ಒಂದು ವಿಷಯ ಹೇಳಲೇಬೇಕು. ಸುಹಾಸಿನಿ, ಕಮಲ್ ಹಾಸನ್ ಅವರಿಗೆ ಮಗಳಾಗಬೇಕು. ಸುಹಾಸಿನಿ, ಚಾರು ಹಾಸನ್ (ತಬರನ ಕಥೆಯ ತಬರ) ಮಗಳು. ಚಾರು ಹಾಸನ್, ಕಮಲ್ ಹಾಸನ್ ಅಣ್ಣ. ಅಣ್ಣನ ಮಗಳು, ಮಗಳೇ ತಾನೆ.. ಆದರೆ, ಸುಹಾಸಿನಿ ಇದಿಷ್ಟಕ್ಕೇ ಅಲ್ಲ..
ಸುಹಾಸಿನಿ ಚಿತ್ರರಂಗಕ್ಕೆ ಬರುತ್ತೇನೆ ಎಂದಾಗ ತಾಂತ್ರಿಕವಾಗಿಯೂ ಕಲಿತಿರಬೇಕು ಎಂದು ಫಿಲಂ ಇನ್ಸ್ಟಿಟ್ಯೂಟ್‌ಗೆ ಸೇರಿಸಿದ್ದವರು, ಹಣ ಕಟ್ಟಿದ್ದವರು ಸ್ವತಃ ಕಮಲ್ ಹಾಸನ್ ಅವರೇ ಅಂತೆ. ಅಷ್ಟೇ ಅಲ್ಲ, ಮಣಿರತ್ನಂ ಅವರು ಪರಿಚಿತವಾಗಿದ್ದೂ ಕಮಲ್ ಮೂಲಕವೇ. ಇದು ಇಷ್ಟಕ್ಕೇ ನಿಲ್ಲಲ್ಲ, ಮಣಿರತ್ನಂ ಅವರಿಗೂ ನಿರ್ದೇಶಕರಾಗಿ ಜೀವನ ಕೊಟ್ಟಿದ್ದು ನೀವೇ.. ಹೀಗಾಗಿ ನೀವಿಲ್ಲದೆ ನಮ್ಮ ಜೀವನದಲ್ಲಿ ಏನೂ ಇಲ್ಲ ಎಂದು ಬಹಿರಂಗ ವೇದಿಕೆಯಲ್ಲಿಯೇ ಹೇಳಿಕೊಂಡಿದ್ದಾರೆ ಸುಹಾಸಿನಿ.