` ಮತ್ತೆ ನಿರ್ದೇಶನಕ್ಕಿಳೀತಾರೆ ಕಿಚ್ಚ - chitraloka.com | Kannada Movie News, Reviews | Image

User Rating: 4 / 5

Star activeStar activeStar activeStar activeStar inactive
 
sudeep will be back to direction soons
Sudeep

ಪೈಲ್ವಾನ್ ಗೆದ್ದ ಜೋಶ್‌ನಲ್ಲಿರೋ ಸುದೀಪ್ ಮತ್ತೆ ನಿರ್ದೇಶನಕ್ಕಿಳಿಯುತ್ತಿದ್ದಾರೆ. ಸದ್ಯಕ್ಕೆ ಕೋಟಿಗೊಬ್ಬ-೩ಯಲ್ಲಿ ಬ್ಯುಸಿಯಾಗಿರುವ ಸುದೀಪ್, ಹಿಂದಿಯಲ್ಲಿ ದಬಂಗ್-೩ಯಲ್ಲಿ ನಟಿಸಿದ್ದಾರೆ. ಇದಾದ ಮೇಲೆ ಪ್ಯಾಂಟಮ್ ಹಾಗೂ ಇನ್ನೊಂದು ಬಹುಭಾಷಾ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆ ಕೆಲಸ ಮುಗಿದ ಮೇಲೆ ನಿರ್ದೇಶನದ ಸಿನಿಮಾ ಶುರುವಾಗಲಿದೆ.

ಇದುವರೆಗೆ ಸುದೀಪ್ ೬ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಮೈ ಆಟೋಗ್ರಾಫ್, #೭೩ ಶಾಂತಿ ನಿವಾಸ, ವೀರಮದಕರಿ, ಜಸ್ಟ್ ಮಾತ್ ಮಾತಲ್ಲಿ, ಕೆಂಪೇಗೌಡ ಮತ್ತು ಮಾಣಿಕ್ಯ. ೨೦೨೦ರ ಮಧ್ಯಭಾಗದಲ್ಲಿ ೭ನೇ ಚಿತ್ರಕ್ಕೆ ಡೈರೆಕ್ಟರ್ ಕ್ಯಾಪ್ ತೊಡಲಿದ್ದಾರೆ ಸುದೀಪ್. ಅಫ್‌ಕರ‍್ಸ್, ಈ ಬಗ್ಗೆ ಸುದೀಪ್ ಅವರಿಂದ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery