` ಪಾಸಿಟಿವ್ ಶಿವಣ್ಣನಿಗೆ ನೆಗೆಟಿವ್ ಆಗೋ ಆಸೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
shivarajkumar interested in negative roles
Shivarajkumar

sಶಿವರಾಜ್ ಕುಮಾರ್ ಚಿತ್ರಗಳೆಂದರೆ ಅಲ್ಲೊಂದು ಪಾಸಿಟಿವ್ ಎನರ್ಜಿ ಇರುತ್ತೆ. ಪಾಸಿಟಿವ್ ಸಂದೇಶವೂ ಇರುತ್ತೆ. ಶಿವಣ್ಣ ಇದುವರೆಗೆ ನೆಗೆಟಿವ್ ಕ್ಯಾರೆಕ್ಟರ್ ಮಾಡಿಲ್ಲ. ಆದರೆ ಇತ್ತೀಚೆಗೆ ಶಿವಣ್ಣಂಗೆ ನೆಗೆಟಿವ್ ಶೇಡ್ ಇರುವ ಪಾತ್ರ ಮಾಡಬೇಕು ಎಂಬ ತುಡಿತ ಹೆಚ್ಚಾಗಿಬಿಟ್ಟಿದೆ.

ಎಷ್ಟು ದಿನಾಂತ ಒಳ್ಳೆಯವನಾಗಿರೋದು, ವಿಲನ್ ಪಾತ್ರಗಳನ್ನೂ ಮಾಡಬೇಕು. ನಾನೊಬ್ಬ ಕಲಾವಿದ. ನಿರ್ದೇಶಕರ ಆಸೆಯಂತೆ ವಿಲನ್ ಶೇಡ್ ಇರುವ ಪಾತ್ರಕ್ಕೆ ಓಕೆ ಎಂದಿದ್ದೇನೆ. ಶಿವರಾಜ್ ಕುಮಾರ್ ಅವರನ್ನು ವಿಲನ್ ರೀತಿಯ ಪಾತ್ರಕ್ಕೆ ಒಪ್ಪಿಸಿರುವುದು ಬಂಗಾರ ಸನ್ ಆಫ್ ಬಂಗಾರದ ಮನುಷ್ಯ ಸಿನಿಮಾ ಮಾಡಿದ್ದ ಯೋಗಿ ಜಿ.ರಾಜ್. ಈ ಚಿತ್ರಕ್ಕೆ ಕಾರ್ತಿಕ್ ಗೌಡ ನಿರ್ಮಾಪಕರಾಗಿದ್ದಾರೆ.

ಶಿವರಾಜ್ ಕುಮಾರ್ ಈ ಮೊದಲು ಓಂನಲ್ಲಿ ನೆಗೆಟಿವ್ ಶೇಡ್ ಪಾತ್ರ ಮಾಡಿದ್ದರೂ, ಪಾಸಿಟಿವ್ ಶೇಡ್‌ಗಳಿದ್ದವು. ಮಫ್ತಿಯಲ್ಲೂ ಅಷ್ಟೆ, ನೆಗೆಟಿವ್ ಎಂದುಕೊAಡರೂ, ಅದೇ ಪಾಸಿಟಿವ್ ಆಗುತ್ತೆ. ಹೊಸ ಚಿತ್ರದಲ್ಲಿ ಎಷ್ಟರಮಟ್ಟಿಗೆ ವಿಲನ್..? ಕಾಯಬೇಕು. ಕಾದು ನೋಡಬೇಕು.

India Vs England Pressmeet Gallery

Odeya Audio Launch Gallery