` ನ.೨೨ಕ್ಕೆ ಅಣ್ಣಾವ್ರ ದಾರಿ ತಪ್ಪಿದ ಮಗ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
dr rajkumar's daari thappidha maga to re release
Daari Thappidha Maga Movie Image

ಡಾ.ರಾಜ್ ಚಿತ್ರಗಳೇ ಹಾಗೆ. ಕಸ್ತೂರಿ ನಿವಾಸ, ಬಭ್ರುವಾಹನ, ತಾಯಿಗೆ ತಕ್ಕ ಮಗ, ಸತ್ಯ ಹರಿಶ್ಚಂದ್ರ, ಆಪರೇಷನ್ ಡೈಮಂಡ್ ರ‍್ಯಾಕೆಟ್, ಗಂಧದ ಗುಡಿ, ಶಂಕರ್ ಗುರು.. ಮೊದಲಾದ ಚಿತ್ರಗಳು ಪದೇ ಪದೇ ರಿಲೀಸ್ ಆಗಿ ಗೆದ್ದಿವೆ. ಈಗ ದಾರಿ ತಪ್ಪಿದ ಮಗನ ಸರದಿ.

ಡಾ.ರಾಜ್ ಕುಮಾರ್ ಈ ಚಿತ್ರದಲ್ಲಿ ಕಳ್ಳ ಮತ್ತು ಮರೆಗುಳಿ ಲೆಕ್ಚರರ್  ಎರಡೂ ಆಗಿ ನಟಿಸಿದ್ದಾರೆ. ವಿತರಕ ಎಂ.ಮುನಿರಾಜು ಚಿತ್ರವನ್ನು ೭.೧ ಡಿಟಿಎಸ್ ಹಾಗೂ ೨ಕೆ ರೆಸಲ್ಯೂಷನ್‌ನಲ್ಲಿ ಹೊಸ ರೂಪ ಕೊಟ್ಟಿದ್ದಾರೆ. ೧೯೭೫ರಲ್ಲಿ ರಿಲೀಸ್ ಆಗಿದ್ದ ಸಿನಿಮಾ ಆಗ ೧೨೫ ದಿನಗಳ ಯಶಸ್ವೀ ಪ್ರದರ್ಶನ ಕಂಡಿತ್ತು. ಈಗ ನವೆಂಬರ್ ೨೨ರಂದು ೧೨೦ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದೆ.

ಡಾ.ರಾಜ್ ಎದುರು ಕಲ್ಪನಾ, ಆರತಿ, ಮಂಜುಳಾ, ಜಯಮಾಲಾ ನಾಯಕಿಯರು. ನಾಲ್ಕು ಹಾಡುಗಳಿದ್ದು, ನಾಲ್ಕೂ ಹಾಡುಗಳು ಸೂಪರ್ ಹಿಟ್. ಪೇಕೇಟಿ ಶಿವರಾಜ್ ನಿರ್ದೇಶನದ ಚಿತ್ರಕ್ಕೆ ಜಿ.ಕೆ.ವೆಂಕಟೇಶ್ ಸಂಗೀತವಿದೆ.

Babru Teaser Launch Gallery

Odeya Audio Launch Gallery