ಆಯುಷ್ಮಾನ್ ಭವ, ಇದೇ ವಾರ ರಿಲೀಸ್ ಆಗುತ್ತಿರುವ ಬಹುನಿರೀಕ್ಷಿತ ಚಿತ್ರ. ಕಾರಣ ಒಂದೆರಡಲ್ಲ..ಇದು ಶಿವಣ್ಣ-ವಾಸು ಕಾಂಬಿನೇಷನ್ನಿನ ೨ನೇ ಸಿನಿಮಾ. ಶಿವಲಿಂಗದ ನಂತರ.
ದ್ವಾರಕೀಶ್, ವಾಸು ಕಾಂಬಿನೇಷನ್ನಿನ ೨ನೇ ಸಿನಿಮಾ. ಆಪ್ತಮಿತ್ರದ ನಂತರ.ದ್ವಾರಕೀಶ್-ಶಿವಣ್ಣ-ಪಿ.ವಾಸು ಒಟ್ಟಿಗೇ ಸೇರಿರುವುದು ಇದೇ ಪ್ರಥಮ. ಈ ಪ್ರಥಮದಲ್ಲೂ ವಿಶೇಷವಿದೆ. ದ್ವಾರಕೀಶ್ ಚಿತ್ರಕ್ಕೀಗ ೫೦ ವರ್ಷ. ಇದು ೫೨ನೇ ಸಿನಿಮಾ. ದ್ವಾರಕೀಶ್ ನಿರ್ಮಾಪಕರಾಗಿದ್ದೇ ಮೇಯರ್ ಮುತ್ತಣ್ಣ ಚಿತ್ರದಿಂದ.
ಹಾಗೆ ಶುರುವಾದ ಜರ್ನಿ ೫೦ನೇ ವರ್ಷಕ್ಕೆ ತಂದು ನಿಲ್ಲಿಸಿದೆ. ಇಡೀ ದೇಶದಲ್ಲಿ ೫೦ ವರ್ಷ ಪೂರೈಸಿಯೂ ಚಿತ್ರರಂಗದಲ್ಲಿರೋ ಸಂಸ್ಥೆಗಳ ಸಂಖ್ಯೆ ೫ನ್ನೂ ಕೂಡಾ ದಾಟಲ್ಲ ಎನ್ನುವುದು ವಿಶೇಷ. ಈಗ ೫೦ನೇ ವರ್ಷದಲ್ಲಿ ಶಿವಣ್ಣ, ದ್ವಾರಕೀಶ್ ಚಿತ್ರದಲ್ಲಿ ನಟಿಸಿದ್ದಾರೆ.