` ರಾಧಿಕಾ ಕುಮಾರಸ್ವಾಮಿಯವರ ೩ ಮಕ್ಕಳಿಗೂ ದರ್ಶನ್ ಅಂದ್ರೆ ಇಷ್ಟ..! - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
radhika reveals her kids favorite actor
Radhika Kumaraswamy

ದಮಯಂತಿ ಚಿತ್ರದ ವೇಳೆ ರಾಧಿಕಾ ಕುಮಾರಸ್ವಾಮಿ ಈ ವಿಷಯ ಬಹಿರಂಗಪಡಿಸಿ ಅಚ್ಚರಿ ಮೂಡಿಸಿದ್ದಾರೆ. ಗೆಳೆಯ ದರ್ಶನ್ ಅವರಿಂದ ದಮಯಂತಿ ಟ್ರೇಲರ್ ರಿಲೀಸ್ ಮಾಡಿಸಿದ ರಾಧಿಕಾ, ದರ್ಶನ್ ಅವರನ್ನು ತಮ್ಮ ಮೂರು ಮಕ್ಕಳೂ ಇಷ್ಟಪಡುತ್ತಾರೆ ಎಂದು ತಿಳಿಸಿದರು.

ತಕ್ಷಣ ಸ್ಪಷ್ಟನೆಯನ್ನೂ ಕೊಟ್ಟ ರಾಧಿಕಾ ಮೂರು ಮಕ್ಕಳೆಂದರೆ ನನಗೆ ಇರೋದು ಒಬ್ಬಳೇ ಮಗಳು. ಇನ್ನಿಬ್ಬರು ಅಣ್ಣನ ಮಕ್ಕಳು. ಅವರನ್ನೂ ನಾನು ನನ್ನ ಮಕ್ಕಳೆಂದೇ ಭಾವಿಸುತ್ತೇನೆ. ಆಮೇಲೆ ದೊಡ್ಡ ವಿವಾದವಾಗಿಬಿಟ್ಟರೆ ಕಷ್ಟ ಎಂದು ನಕ್ಕರು.

ದಮಯಂತಿ ಟ್ರೇಲರ್ ರಿಲೀಸ್ ಮಾಡಿದ ದರ್ಶನ್ `ರಾಧಿಕಾ ನನಗಿಂತ ಒಂದು ಸಿನಿಮಾ ಸೀನಿಯರ್. ಅವರ ಕಾಲದ ಹೀರೋಯಿನ್ಸ್ ಈಗ ಸಿನಿಮಾ ಮಾಡ್ತಿಲ್ಲ. ರಾಧಿಕಾ ಅವರು ಮಾಡುತ್ತಿದ್ದಾರೆ. ಒಳ್ಳೆಯದಾಗಲಿ' ಎಂದು ಶುಭ ಹಾರೈಸಿದ್ರು.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery