ಕನ್ನಡದ ಸೂಪರ್ ಹಿಟ್ ಸಿನಿಮಾ ಬೆಲ್‌ಬಾಟಂ ಹಿಂದಿಗೆ ರೀಮೇಕ್ ಆಗುತ್ತಿದೆ. ಅದರಲ್ಲಿ ಅಕ್ಷಯ್ ಕುಮಾರ್ ಡಿಟೆಕ್ಟಿವ್ ದಿವಾಕರ್ ಪಾತ್ರ ಮಾಡಲಿದ್ದಾರೆ ಎನ್ನಲಾಗಿತ್ತು. ಅದಕ್ಕೆ ತಕ್ಕಂತೆ ಅಕ್ಷಯ್ ಕುಮಾರ್ ಅಭಿನಯದ ಬೆಲ್‌ಬಾಟಂ ಚಿತ್ರದ ಪೋಸ್ಟರ್ ಕೂಡಾ ರಿಲೀಸ್ ಆಗಿತ್ತು. ರೆಟ್ರೋ ಸ್ಟೆöÊಲಿನಲ್ಲಿದ್ದ ಅಕ್ಷಯ್ ಕುಮಾರ್ ಗೆಟಪ್ ನೋಡಿದವರು, ಇದು ಪಕ್ಕಾ ಬೆಲ್‌ಬಾಟಂ ರೀಮೇಕ್ ಎಂದುಕೊAಡಿದ್ದರೆ ಆಶ್ಚರ್ಯವಿಲ್ಲ. ಆದರೆ, ಈಗ ಹಿಂದಿ ಚಿತ್ರತಂಡದವರಿAದಲೇ ಅಧಿಕೃತ ಸುದ್ದಿ ಹೊರಬಿದ್ದಿದೆ.
ಬೆಲ್‌ಬಾಟಂ, ರೀಮೇಕ್ ಚಿತ್ರವಲ್ಲ. ಸಂಪೂರ್ಣ ಸ್ವಮೇಕ್ ಸಿನಿಮಾ ಎಂದಿದ್ದಾರೆ ಅಕ್ಷಯ್ ಕುಮಾರ್. ಕೆಲವು ಸತ್ಯಘಟನೆಗಳನ್ನಾಧರಿಸಿದ ಸಿನಿಮಾ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ ಅಕ್ಷಯ್.
ಇತ್ತೀಚೆಗೆ ಒಂದು ಮೊಟ್ಟೆಯ ಕಥೆ ರೀಮೇಕ್ ತೆರೆ ಕಂಡಿತ್ತು. ಆದರೆ, ಕಥೆಯ ಥೀಮ್ ಮಾತ್ರ ಉಳಿಸಿಕೊಂಡಿದ್ದ ಚಿತ್ರತಂಡ, ಚಿತ್ರಕಥೆಯನ್ನು ಬದಲಿಸಿಕೊಂಡಿತ್ತು. ಕ್ರೆಡಿಟ್‌ನ್ನು ಕೂಡ ಕೊಟ್ಟಿರಲಿಲ್ಲ. ಬೆಲ್‌ಬಾಟಂ ಕೂಡಾ ಹಾಗೆಯೇ ಮಾಡುತ್ತಾ..?