ಕಿಚ್ಚ ಸುದೀಪ್ ಒಳ್ಳೆಯ ನಟ, ಅಡುಗೆ ಭಟ್ಟ ಅಷ್ಟೇ ಅಲ್ಲ, ಸಿಂಗರ್. ಗಿಟಾರ್ ವಾದಕ. ಈಗ ಕೃಷ್ಣ ಟಾಕೀಸ್ ಚಿತ್ರದಲ್ಲಿ ಹಾಡೊಂದನ್ನು ಹಾಡಲು ರೆಡಿಯಾಗಿದ್ದಾರೆ. `ನೈಟಿ ಮಾತ್ರ ಹಾಕ್ಕೊಬೇಡ ಮೇನಕ.. ನಮಗೆ ನೈಂಟಿ ಹೊಡದಂಗಾಗ್ತದೆ ಜೀವಕ.. ಅನ್ನೋ ಹಾಡಿದು.
ಪ್ರಮೋದ್ ಮರವಂತೆ, ಅಭಿ ಎಸ್. ಬರೆದಿರುವ ಹಾಡಿದು. ಈಗಾಗಲೇ ಹಾಡಿನ ಶೂಟಿಂಗ್ ಆಗಿದೆ. ಸುದೀಪ್ ಕೂಡಾ ಶ್ರೀಧರ್ ಸಂಭ್ರಮ್ ಕಳಿಸಿದ್ದ ಹಾಡಿನ ಟ್ರಾö್ಯಕ್ ಕೇಳಿ ಇಷ್ಟಪಟ್ಟು ಹಾಡಲು ಓಕೆ ಎಂದಿದ್ದಾರೆ.
ಕೃಷ್ಣ ಅಜೇಯ್ ರಾವ್, ಸಂಜನಾ ಆನಂದ್ ನಟಿಸುತ್ತಿರುವ ಚಿತ್ರಕ್ಕೆ ವಿಜಯ್ ಆನಂದ್ ನಿರ್ದೇಶಕ. ಗೋವಿಂದ ರಾಜು ನಿರ್ಮಾಪಕ.