` ಜೋಗಿ ಚಾಲೆಂಜ್.. ಯಶ್ ಕವನ ವಾಚನ.. ಮುಂದಿನ ಸವಾಲು ಯಾರಿಗೆ ಗೊತ್ತಾ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
yash sings kuvempu poem in kavana challenge
Yash

ಇದು ರಾಜ್ಯೋತ್ಸವದ ಮಾಸ. ಇದನ್ನು ಶುರು ಮಾಡಿದ್ದು ಯಾರೋ ಗೊತ್ತಿಲ್ಲ. ಯುವಾ ಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆ ಸವಾಲು ಸ್ವೀಕರಿಸಿದ ನಂತರ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಟ್ರೆಂಡ್ ಆಗಿದ್ದಂತೂ ಸತ್ಯ.

ಕನ್ನಡ ಕಾವ್ಯ ವಚನ ಸವಾಲು. ತಾವು ಒಂದು ಕಾವ್ಯ ವಾಚಿಸಿ, ತಮ್ಮಂತೆಯೇ ಇನ್ನೂ ಐವರಿಗೆ ಕನ್ನಡದ ಕವಿತೆ ವಾಚಿಸುವ ಸವಾಲು ಹಾಕುವುದು. ಆ ಐವರು ಮತ್ತೆ ಐವರಿಗೆ ಸವಾಲು ದಾಟಿಸುತ್ತಾರೆ. ಸರಪಳಿ ಹೀಗೆಯೇ ಮುಂದುವರಿಯುತ್ತೆ...

ಈ ಹಾದಿಯಲ್ಲಿ ಈಗಾಗಲೇ ಸೂಲಿಬೆಲೆ, ಪೇಜಾವರ ಶ್ರೀಗಳು, ಮಂತ್ರಾಲಯದ ಸುಬುದೇಂದ್ರ ತೀರ್ಥರು, ನಟ ರಮೇಶ್ ಅರವಿಂದ್, ನಟ ಗಣೇಶ್, ಪತ್ರಕರ್ತ ವಿಶ್ವೇಶ್ವರ ಭಟ್, ಜೋಗಿ ಮೊದಲಾದವರು ಕವನ ವಾಚನ ಮಾಡಿದ್ದಾರೆ. ಈ ಕವನ ವಾಚನ ಸರಪಳಿಯಲ್ಲಿ ಜೋಗಿ ತಮ್ಮ ಸವಾಲನ್ನು ಯಶ್ ಅವರಿಗೂ ಹಾಕಿದ್ದರು.

ಯಶ್ ಕುವೆಂಪು ಅವರ ಓ ನನ್ನ ಚೇತನಾ.. ಆಗು ನೀ ಅನಿಕೇತನ ಪದ್ಯವನ್ನು ಹಾಡಿದ್ದಾರೆ. ವಿಶ್ವಮಾನವ ಕವನ ವಾಚಿಸಿ, ಈಗ ಕವನ ವಾಚಿಸುವ ಸವಾಲನ್ನು ತಮ್ಮ ಗುರುಗಳಾದ ನಾಗಾಭರಣ, ನಟರಾದ ರವಿಶಂಕರ್, ರವಿಶಂಕರ್ ಗೌಡ, ಚಿಕ್ಕಣ್ಣ, ಚಿತ್ರ ಸಾಹಿತಿಗಳಾದ ಡಾ.ನಾಗೇಂದ್ರ ಪ್ರಸಾದ್, ಗೌಸ್‌ಪೀರ್ ಅವರಿಗೆ ದಾಟಿಸಿದ್ದಾರೆ.

ಈಗ ನಿಮ್ಮ ಸರದಿ. ನೀವು ಒಂದು ಕನ್ನಡ ಕವನ ಓದಿ. ನಿಮ್ಮ ಗೆಳೆಯರೋ.. ಮತ್ತೊಬ್ಬರೋ.. ಯಾರಾದರೂ ಇರಲಿ, ಅವರಿಗೆ ಸವಾಲು ಹಾಕಿ. ಅವರು ಮತ್ತೆ ಐವರಿಗೆ ಸವಾಲು ಹಾಕಲಿ.. ಕನ್ನಡ ಎಲ್ಲೆಲ್ಲೂ ಮೊಳಗಲಿ..

Babru Teaser Launch Gallery

Odeya Audio Launch Gallery