ಆ ದೃಶ್ಯ ರಿಲೀಸ್ ಹೊತ್ತಲ್ಲಿ ರವಿಚಂದ್ರನ್ ಖುಷಿ ಖುಷಿಯಾಗಿದ್ದಾರೆ. ಕಾರಣ ಇಷ್ಟೆ.. ಅವರೀಗ ಬರೀ ರವಿಚಂದ್ರನ್ ಅಲ್ಲ. ಡಾ. ರವಿಚಂದ್ರನ್. ಈ ಕುರಿತು ಮಾತನಾಡಿದ ರವಿಚಂದ್ರನ್ ಅಕ್ಟೋಬರ್ ೧೮ ನನಗೆ ತುಂಬಾ ವಿಶೇಷವಾದ ದಿನ. ನನ್ನ ಮಗಳ ಹುಟ್ಟುಹಬ್ಬ. ಅವಳ ಹುಟ್ಟುಹಬ್ಬದ ಸಂಭ್ರಮದಲ್ಲಿರುವಾಗಲೇ ನನಗೆ ಯುನಿವರ್ಸಿಟಿಯವರು ಗೌರವ ಡಾಕ್ಟರೇಟ್ ಕೊಡುತ್ತಿದ್ದೇವೆ ಎಂದು ಕರೆ ಮಾಡಿ ತಿಳಿಸಿದರು. ಅದಾದ ಮೇಲೆ ಚಿತ್ರರಂಗದ ಹಲವರು ಇಡೀ ದಿನ ಮೆಸೇಜ್ ಮಾಡಿದರು. ಯು ಡಿಸರ್ವ್ ಇಟ್ ಎಂದರು. ಇನ್ನೂ ಕೆಲವರು ಲೇಟ್ ಆಯ್ತು, ಯಾವಾಗಲೋ ಬರಬೇಕಿತ್ತು ಎಂದರು.
ನಾನು ಹೇಳಿದ್ದು ಇಷ್ಟೆ, ಅದು ಯಾವಾಗ ಬರಬೇಕೋ ಅವಾಗಲೇ ಬರಬೇಕು. ಅದು ಕಿತ್ತುಕೊಂಡು ತೆಗೆದುಕೊಳ್ಳೋ ವಸ್ತುವಲ್ಲ. ಕೆಲವರು ತಗೊಂಡ್ರು, ನನಗೆ ಕೊಟ್ರು. ಅಷ್ಟೇ ವ್ಯತ್ಯಾಸ. ಎಷ್ಟೋ ಜನ ನನಗೆ ಗೌರವ ಡಾಕ್ಟರೇಟ್ ಕೊಡಿಸ್ತೀನಿ ಎಂದು ಬಂದಿದ್ದರು. ಅದು ಬಂದಾಗ ಬರಲಿ ಎಂದು ಅವರನ್ನು ದೂರ ಕಳಿಸಿದ್ದೆ ಎಂದಿದ್ದಾರೆ ರವಿಚಂದ್ರನ್.
ಈ ಗೌರವ ಡಾಕ್ಟರೇಟ್ ಕೊಟ್ಟಿರುವುದು ರವಿಚಂದ್ರನ್ ಅನ್ನೋ ವ್ಯಕ್ತಿಗಲ್ಲ, ಮಾಡಿರುವ ಕೆಲಸಕ್ಕೆ. ಇದು ಗೌರವ, ಜವಾಬ್ದಾರಿ ಎರಡನ್ನೂ ಹೆಚ್ಚಿಸಿದೆ ಎಂದಿದ್ದಾರೆ.