ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮದುವೆ ಮುಹೂರ್ತ ಫಿಕ್ಸ್ ಆಗಿದೆ. ಪೊಗರು ರಿಲೀಸ್ ಆಗುವ ಹೊತ್ತಿಗೆ ಧ್ರುವ ಸರ್ಜಾ ಫುಲ್ ಶರ್ಟ್ ಆಗಿರುತ್ತಾರೆ. ಹಾಫ್ ಶರ್ಟ್ ಆಗಿ ಪ್ರೇರಣಾ ಬಂದಿರುತ್ತಾರೆ. ನವೆಂಬರ್ ೨೪ಕ್ಕೆ ಧ್ರುವ ಸರ್ಜಾ, ಪ್ರೇರಣಾ ಮದುವೆ ಫಿಕ್ಸ್.
ನವೆಂಬರ್ ೨೪ರ ಭಾನುವಾರ ಬೆಳಗ್ಗೆ ೭ ಗಂಟೆ ೧೫ನೇ ನಿಮಿಷದಿಂದ ೭ ಗಂಟೆ ೪೫ ನಿಮಿಷದವರೆಗೆ ಮುಹೂರ್ತ. ವೃಶ್ಚಿಕ ಲಗ್ನದಲ್ಲಿ ವಿವಾಹ ಮಹೋತ್ಸವ ನಡೆಯಲಿದೆ.
ಜೆಪಿ ನಗರದ ೭ನೇ ಹಂತದಲ್ಲಿರುವ ಸಂಸ್ಕೃತಿ ಬೃಂದಾವನ ಕನ್ವೆನ್ಷನ್ ಹಾಲ್‌ನಲ್ಲಿ ವಿವಾಹ ಮಹೋತ್ಸವ ಸಮಾರಂಭ. ಅದೇ ದಿನ ಸಂಜೆ ೭.೩೦ರಿಂದ ಆರತಕ್ಷತೆ. ಹೋಗಿ.. ಹರಸಿ.. ಆಶೀರ್ವದಿಸಿ..