ನಾತಿಚರಾಮಿ ಚಿತ್ರದ ಬಳಿಕ ಚಿತ್ರರಂಗದಿಂದ ಸ್ವಲ್ಪ ದೂರ ಉಳಿದಿದ್ದ ಶ್ರುತಿ ಹರಿಹರನ್ ವಾಪಸ್ ಆಗಿದ್ದಾರೆ. ಮನೆ ಮಾರಾಟಕ್ಕಿಡುವ ಮೂಲಕ. ಮಂಜು ಸ್ವರಾಜ್ ನಿರ್ದೇಶನದ ಮನೆ ಮಾರಾಟಕ್ಕಿದೆ ಚಿತ್ರದಲ್ಲಿ ಶ್ರುತಿ ಹರಿಹರನ್ ಅವರ ಕಂ ಬ್ಯಾಕ್ ಸಿನಿಮಾ. ತಾಯಿಯಾದ ಮೇಲೆ ರಿಲೀಸ್ ಆಗುತ್ತಿರುವ ಚಿತ್ರವಿದು.
ಇದೊಂದು ಹಾರರ್-ಕಾಮಿಡಿ ಡ್ರಾಮಾ ಎಂದು ಹೇಳಿರುವ ನಿರ್ದೇಶಕರು ಇದಕ್ಕಾಗಿ ದೊಡ್ಡ ಹಾಸ್ಯ ಕಲಾವಿದರನ್ನೇ ಕೂಡಿ ಹಾಕಿದ್ದಾರೆ. ಹೌದು ಚಿತ್ರದಲ್ಲಿ ಸಾಧು ಕೋಕಿಲ, ಕುರಿ ಪ್ರತಾಪ, ರವಿಶಂಕರ್ ಗೌಡ, ಚಿಕ್ಕಣ್ಣ ಮತ್ತು ಗಿರಿ ಹಾಸ್ಯ ಕಲಾವಿದರು ನಟಿಸಿದ್ದಾರೆ. ಕಾರುಣ್ಯ ರಾಮ್ ಚಿತ್ರದ ಇನ್ನೊಬ್ಬ ನಾಯಕಿ.
ಚಿತ್ರವನ್ನು ಎಸ್ ವಿ ಬಾಬು ನಿರ್ಮಿಸಿದ್ದು, ದೆವ್ವಗಳಿವೆ ಎಚ್ಚರಿಎಕ ಅನ್ನೋದು ಟ್ಯಾಗ್ಲೈನ್. ಹಾಗಾದರೆ, ಇದು ಹಾರರ್ ಕಾಮಿಡಿ ಚಿತ್ರಾನಾ..? ವೇಯ್ಟ್ & ಸೀ.