ಶರಣ್, ಆಶಿಕಾ ರಂಗನಾಥ್ ಜೋಡಿಯ ಸಿನಿಮಾ ಅವತಾರ್ ಪುರುಷ. ಪುಷ್ಕರ್ ಬ್ಯಾನರ್‌ನಲ್ಲಿ ಇದೇ ಮೊದಲ ಬಾರಿಗೆ ಸಿಂಪಲ್ ಸುನಿ ನಿರ್ದೇಶನ ಮಾಡುತ್ತಿರುವ ಚಿತ್ರ ಅವತಾರ್ ಪುರುಷ. ಶ್ರೀನಗರ ಕಿಟ್ಟಿಯೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಚಿತ್ರಕ್ಕೆ ಚರಣ್ ರಾಜ್ ಸಂಗೀತ ನೀಡಬೇಕಿತ್ತು. ಆರಂಭದಲ್ಲಿ ಚಿತ್ರತಂಡವೂ ಇದೇ ಮಾತು ಹೇಳಿತ್ತು. ಆದರೀಗ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ.
ಇದಕ್ಕೆ ಕಾರಣವೂ ಇದೆ. ರವಿಚಂದ್ರನ್-ಹAಸಲೇಖ, ದರ್ಶನ್-ಹರಿಕೃಷ್ಣ ಜೋಡಿಯಂತೆ ಹಿಟ್ ಆಗಿರುವ ಜೋಡಿ ಶರಣ್-ಜನ್ಯಾ ಕಾಂಬಿನೇಷನ್. ರ‍್ಯಾಂಬೋ, ರ‍್ಯಾಂಬೋ-೨, ಅಧ್ಯಕ್ಷ, ವಿಕ್ಟರಿ, ವಿಕ್ಟರಿ-೨, ಬುಲೆಟ್ ಬಸ್ಯಾ, ಜೈ ಮಾರುತಿ ೮೦೦.. ಹೀಗೆ ಇಬ್ಬರ ಜೋಡಿಯ ಸಿನಿಮಾಗಳ ಎಲ್ಲ ಹಾಡುಗಳೂ ಹಿಟ್ ಆಗಿರುವುದು ಇದಕ್ಕೆ ಕಾರಣ. ಹಿಟ್ ಜೋಡಿಯನ್ನು ಬೇರೆ ಮಾಡೋದೇಕೆ ಎಂಬ ಕಾರಣಕ್ಕೆ ಜನ್ಯಾ, ಅವತಾರ್ ಪುರುಷನಿಗೆ ಸರಿಗಮಪ ಹೇಳುತ್ತಿದ್ದಾರೆ.