ರಿಷಬ್ ಶೆಟ್ಟಿ ಬ್ಯಾನರಿನಲ್ಲಿ ಹೊಸದೊಂದು ಪ್ರಯೋಗದ ಮೊದಲ ಝಲಕ್ ಹೊರಬಿದ್ದಿದೆ. ೭ ಮಂದಿ ನಿರ್ದೇಶಕರು, ೭ ಕಥೆಗಳು.. ಅವುಗಳೆಲ್ಲವನ್ನೂ ಸೇರಿಸಿ ಒಂದು ಸಿನಿಮಾ. ಈ ಪ್ರಯೋಗದ ಕಥೆಯೇ ಕಥಾ ಸಂಗಮ. ವಿಶೇಷವೆಂದರೆ ಈ ೭ ಕಥೆಗಳಲ್ಲಿ ಯಾವೊಂದು ಕಥೆಗೂ ರಿಷಬ್ ಡೈರೆಕ್ಷನ್ ಇಲ್ಲ. ಆದರೆ ಒಂದು ಕಥೆಯಲ್ಲಿ ಹುಚ್ಚನಾಗಿ ಕಾಣಿಸಿಕೊಂಡಿದ್ದಾರೆ ರಿಷಬ್ ಶೆಟ್ಟಿ.
ಫ್ಯಾಮಿಲಿ ಮ್ಯಾನ್ ಕಿಶೋರ್, ನರಳುವ ಪ್ರೇಮಿಯಾಗಿ ರಾಜ್ ಬಿ.ಶೆಟ್ಟಿ, ಹುಚ್ಚ ಅಲೆಮಾರಿಯಾಗಿ ರಿಷಬ್ ಶೆಟ್ಟಿ ಇದ್ದಾರೆ. ಹರಿಪ್ರಿಯಾ, ರಿಷಬ್ ಪಾತ್ರಕ್ಕೆ ಮುಖಾಮುಖಿಯಾಗುತ್ತಾರೆ. ಪ್ರಕಾಶ್ ಬೆಳವಾಡಿ ಬೆರಗು ಹುಟ್ಟಿಸುತ್ತಾರೆ. ಅಲ್ಲೊಂದು ತಾಯಿ ಮಗುವಿನ ಕಥೆಯೂ ಇದೆ. ವಿಭಿನ್ನ ಕಥಾ ಹಂದರ ಹೊಂದಿರುವ ಕಥಾ ಸಂಗಮ ಕುತೂಹಲ ಹುಟ್ಟಿಸುವಲ್ಲಿ ಗೆದ್ದಿದೆ.