ಹೆಸರಾಂತ ಚಿತ್ರನಟಿ ಯಜ್ಞಾಶೆಟ್ಟಿ, ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಉದ್ಯಮಿ ಸಂದೀಪ್ ಶೆಟ್ಟಿ ಜೊತೆ ಮದುವೆಯಾಗಿದ್ದಾರೆ. ಮಂಗಳೂರಿನಲ್ಲಿ ನಡೆದ ಅದ್ಧೂರಿ ವಿವಾಹ ಕಾರ್ಯಕ್ರಮದಲ್ಲಿ ಕುಮಾರಿ ಯಜ್ಞಾಶೆಟ್ಟಿ, ಶ್ರೀಮತಿ ಯಜ್ಞಾಶೆಟ್ಟಿಯಾಗಿದ್ದಾರೆ.
ಉದ್ಯಮಿ ಸಂದೀಪ್ ಶೆಟ್ಟಿ, ಮಂಗಳೂರಿನವರಾದರೂ ನೆಲೆಸಿರುವುದು ಮುಂಬೈನಲ್ಲಿ. ಹೋಟೆಲ್ ಮತ್ತು ಫ್ಯಾಕ್ಟರಿ ಬ್ಯುಸಿನೆಸ್. ಮದುವೆ ನಂತರ ನಟನೆಯಲ್ಲಾದರೂ ಮುಂದುವರಿಯಬಹುದು ಅಥವಾ ಪತಿಯ ಬ್ಯುಸಿನೆಸ್ ನೋಡಿಕೊಳ್ಳಬಹುದು. ಆಯ್ಕೆ ಯಜ್ಞಾಶೆಟ್ಟಿ ಅವರದ್ದೇ.
ಯಜ್ಞಾಶೆಟ್ಟಿ ಮದುವೆಗೆ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ಪ್ರಮೋದ್ ಶೆಟ್ಟಿ ಸೇರಿದಂತೆ ಚಿತ್ರರಂಗದ ಗಣ್ಯರು ಶುಭ ಹಾರೈಸಿದ್ದಾರೆ. ಉಳಿದವರು ಕಂಡಂತೆ, ಕಿಲ್ಲಿಂಗ್ ವೀರಪ್ಪನ್, ಎದ್ದೇಳು ಮಂಜುನಾಥ, ಸುಗ್ರೀವ, ಕಳ್ಳ ಮಳ್ಳ ಸುಳ್ಳ, ಲಕ್ಷ್ಮಿಸ್ ಎನ್ಟಿಆರ್.. ಮೊದಲಾದ ಚಿತ್ರಗಳಲ್ಲಿ ನಟಿಸಿದ್ದ ಕುದುರೆಮುಖದ ಚೆಲುವೆ ಯಜ್ಞಾ ಶೆಟ್ಟಿ. ಕರಾವಳಿಯ ಚೆಲುವೆ.