ದುನಿಯಾ ಸೂರಿ ನಿರ್ದೇಶನದ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ಶೂಟಿಂಗ್ ಮುಗಿದು, ಡಬ್ಬಿಂಗ್ ಶುರುವಾಗಿದೆ. ಆಕಾಶ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಡಬ್ಬಿಂಗ್ ಆರಂಭಿಸಿದ್ದಾರೆ ದುನಿಯಾ ಸೂರಿ. ಟಗರು ನಂತರ ಸೂರಿ ನಿರ್ದೇಶಿಸಿರುವ ಮತ್ತೊಮ್ಮೆ ಧನಂಜಯ್ ಜೊತೆ ಮಾಡುತ್ತಿರುವ ಸಿನಿಮಾ ಇದು.
ಟಗರು ನಂತರ ಧನಂಜಯ್‍ರನ್ನು ಡಾಲಿ ಎಂದೇ ಗುರುತಿಸುವವರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಎಲ್ಲರ ನಿರೀಕ್ಷೆಗೆ ತಕ್ಕಂತೆ ಸಿನಿಮಾ ಬರಲಿದೆ ಎಂದಿದ್ದಾರೆ ಸೂರಿ. ಧನಂಜಯ್ ಜೊತೆ ಅಮೃತಾ ಅಯ್ಯಂಗಾರ್, ಸಪ್ತಮಿ, ಮೋನಿಕಾ ನಟಿಸಿದ್ದಾರೆ. ಪ್ರೊಡಕ್ಷನ್ ಮ್ಯಾನೇಜರ್ ಆಗಿದ್ದ ಸುಧೀರ್, ಈ ಚಿತ್ರದ ಮೂಲಕ ನಿರ್ಮಾಪಕರಾಗಿದ್ದಾರೆ.