ಇದೇ ವಾರ ರಿಲೀಸ್ ಆಗುತ್ತಿರುವ ರಂಗನಾಯಕಿ ಚಿತ್ರದ ನಾಯಕಿ ಎಲ್ಲರಿಗೂ ಗೊತ್ತಿದೆ. ಆದಿತಿ ಪ್ರಭುದೇವ ಎಂಬ ಸ್ಯಾಂಡಲ್‍ವುಡ್‍ನಲ್ಲಿ ಅರಳುತ್ತಿರುವ ಪ್ರತಿಭೆ ಆದಿತಿ. ವೃತ್ತಿ ಜೀವನದ ಆರಂಭದ ದಿನಗಳಲ್ಲೆ ಸವಾಲಿನ ಪಾತ್ರ ಎದುರಿಸಿದ್ದಾರೆ ಆದಿತಿ. ಅತ್ಯಾಚಾರಕ್ಕೊಳಗಾಗಿ.. ನಂತರ ನ್ಯಾಯಕ್ಕಾಗಿ ಕಾನೂನು ಹೋರಾಟ ಮಾಡುವ ಯುವತಿಯ ಪಾತ್ರ ಆದಿತಿಯದ್ದು. ಇಷ್ಟು ನಾಯಕಿ ಓರಿಯಂಟೆಡ್ ಆಗಿರೋ ಚಿತ್ರದ ಹೀರೋ ಯಾರು..?
ಟೋಪಿವಾಲಾ, ಬೀರ್‍ಬಲ್, ಶ್ರೀನಿವಾಸ ಕಲ್ಯಾಣ ಚಿತ್ರಗಳನ್ನು ನಿರ್ದೇಶಿಸಿದ್ದ, ನಾಯಕರಾಗಿಯೂ ಗೆದ್ದಿರುವ ಶ್ರೀನಿವಾಸ್, ಈ ಚಿತ್ರದ ಹೀರೋ. ಬೀರ್‍ಬಲ್ ನಂತರ ಮುಂದಿನ ಚಿತ್ರಕ್ಕೆ ರೆಡಿಯಾಗುತ್ತಿದೆ. ಆಗ ದಯಾಳ್ ಈ ಚಿತ್ರದ ಕಥೆ ಹೇಳಿ, ಪಾತ್ರದ ಆಫರ್ ಕೊಟ್ಟರು. ಕಥೆಯೂ ಇಷ್ಟವಾಯ್ತು. ಪಾತ್ರವೂ ಇಷ್ಟವಾಯ್ತು. ಒಂದೊಳ್ಳೆ ಸಂದೇಶ ಹೇಳುವ ಚಿತ್ರ ಮತ್ತು ಪಾತ್ರ ಎಂದಿದ್ದಾರೆ ಶ್ರೀನಿ.
ತ್ರಿವಿಕ್ರಮ್ ಚಿತ್ರದ ಇನ್ನೊಂದು ಪ್ರಮುಖ ಪಾತ್ರದಲ್ಲಿದ್ದಾರೆ. ಇದೇ ನವೆಂಬರ್ 1ರಂದು ಸಿನಿಮಾ ರಿಲೀಸ್ ಆಗುತ್ತಿದೆ.