ಕೆಜಿಎಫ್ ಚಾಪ್ಟರ್ 1 ಸಿನಿಮಾ ಇದೇ ರಾಜ್ಯೋತ್ಸವಕ್ಕೆ ಮತ್ತೆ ಬಿಡುಗಡೆಯಾಗುತ್ತಿದೆ. 25 ರಿಂದ 30 ಸ್ಕ್ರೀನ್‍ಗಳಲ್ಲಿ ಕೆಜಿಎಫ್ ಬಿಡುಗಡೆಯಾಗುತ್ತಿದ್ದು, ಇದು ರಾಜ್ಯೋತ್ಸವ ಸ್ಪೆಷಲ್. ಊರ್ವಶಿ, ಕಾವೇರಿ ಸೇರಿದಂತೆ ಕೆಲವು ಮಲ್ಟಿಪ್ಲೆಕ್ಸ್‍ಗಳಲ್ಲೂ ಕೆಜಿಎಫ್ ಮತ್ತೆ ತೆರೆ ಕಾಣುತ್ತಿದೆ.
ಯಶ್, ಶ್ರೀನಿಧಿ ಶೆಟ್ಟಿ ಅಭಿನಯದ ಕೆಜಿಎಫ್ ಚಾಪ್ಟರ್ 1, ಪ್ರಶಾಂತ್ ನೀಲ್ ಅವರ ನಿರ್ದೇಶನದಲ್ಲಿ ತೆರೆ ಕಂಡಿತ್ತು. ಚಾಪ್ಟರ್ 2 ಚಿತ್ರೀಕರಣ ಬಿರುಸಿನಿಂದ ಸಾಗಿದ್ದು, ಮುಂದಿನ ವರ್ಷ ರಿಲೀಸ್ ಆಗಲಿದೆ.