ಯಶ್ ಮತ್ತು ರಾಧಿಕಾ ಪಂಡಿತ್ ಮನೆಯಲ್ಲೀಗ ಮತ್ತೆ ಸಂಭ್ರಮ. ಐರಾಗೊಬ್ಬ ತಮ್ಮ ಬಂದಿದ್ದಾನೆ. ರಾಧಿಕಾ ಪಂಡಿತ್ 2ನೇ ಮಗುವಿಗೆ ತಾಯಿಯಾಗಿದ್ದಾರೆ. ಪೋರ್ಟಿಸ್ ಆಸ್ಪತ್ರೆಯಲ್ಲಿ ರಾಧಿಕಾ ಪಂಡಿತ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಡಿಸೆಂಬರ್ 2, 2018ರಂದು ರಾಧಿಕಾ ಪಂಡಿತ್, ಐರಾಳಿಗೆ ಜನ್ಮ ನೀಡಿದ್ದರು. ನಂತರ ಜೂನ್‍ನಲ್ಲಿ ಮತ್ತೊಮ್ಮೆ ಗರ್ಭಿಣಿ ಎನ್ನುವುದನ್ನು ಬಹಿರಂಗಪಡಿಸಿದ್ದರು. ಈಗ ಅಕ್ಟೋಬರ್ 30ರಂದು ಮಗ ಹುಟ್ಟಿದ್ದಾನೆ.