` JAMES  ಮೊದಲ ಸೀಕ್ರೆಟ್ ಔಟ್ : JAMES ಎಂದರೆ ಏನ್ ಗೊತ್ತಾ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
what is the mening of james
James Movie Image

ಭರಾಟೆ ಮುಗಿಸಿ, ಹ್ಯಾಟ್ರಿಕ್ ಯಶಸ್ಸಿನಲ್ಲಿರೋ ನಿರ್ದೇಶಕ ಚೇತನ್ ಕುಮಾರ್, ಯುವರತ್ನದಲ್ಲಿ ಬ್ಯುಸಿಯಾಗಿರುವ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಇಬ್ಬರೂ ಒಟ್ಟಿಗೇ ನವೆಂಬರ್‍ನಲ್ಲಿ ಕೆಲಸ ಶುರುಮಾಡಲಿದ್ದಾರೆ. ಜೇಮ್ಸ್ ಚಿತ್ರಕ್ಕಾಗಿ. ನವೆಂಬರ್ ತಿಂಗಳಲ್ಲಿ ಜೇಮ್ಸ್ ಚಿತ್ರಕ್ಕೆ ಮುಹೂರ್ತ ಫಿಕ್ಸ್ ಆಗಿದೆ.

ಈ ಚಿತ್ರದಲ್ಲಿ ಅಪ್ಪು ಬೇರೆ ಬೇರೆ ರೀತಿಯ ಶೇಡ್‍ಗಳಲ್ಲಿ ಕಾಣಿಸಿಕೊಳ್ತಾರೆ. ಪಕ್ಕಾ ಮಾಸ್ ಆ್ಯಕ್ಷನ್ ಸಿನಿಮಾ. ಚಿತ್ರದಲ್ಲೊಂದು ಅದ್ಭುತ ಸಂದೇಶವೂ ಇದೆ ಎನ್ನುತ್ತಾರೆ ಚೇತನ್ ಕುಮಾರ್. ಇಷ್ಟಕ್ಕೂ JAMES ಎಂದರೆ ಏನರ್ಥ. ಅದು ನಾಯಕನ ಹೆಸರಾ ಎಂಬ ಪ್ರಶ್ನೆಗೆ ಉತ್ತರವನ್ನೂ ಕೊಟ್ಟಿದ್ದಾರೆ.

JAMES ಎಂದರೆ ಜಗ್ಗೇನಹಳ್ಳಿ ಮಾದಪ್ಪ ಹೀರಮ್ಮನ ಮಗ ಸಂತು ಎಂದರ್ಥ. ಅದನ್ನು ಶಾರ್ಟ್ & ಸ್ವೀಟ್ ಆಗಿ JAMES ಎನ್ನಲಾಗಿದೆ. ಸಂತೆಯಲ್ಲಿ ನಿಂತ ಕಬೀರ ಚಿತ್ರ ನಿರ್ಮಿಸಿದ್ದ ಕಿಶೋರ್ ಪತ್ತಿಕೊಂಡ JAMES ನಿರ್ಮಾಪಕ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery