` ರೇಪ್ ಆದ ಹೆಣ್ಣು ಕನ್ಯತ್ವ ಕಳೆದುಕೊಳ್ಳಲ್ಲ : ರಂಗನಾಯಕಿ ದಿಟ್ಟ ವಾದ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ranganayaki writes new definition
Ranganayaki Movie Image

ನಾವು ಸಾಮಾನ್ಯವಾಗಿ ಸಿನಿಮಾ, ಕಥೆ, ಕಾದಂಬರಿ ಅಷ್ಟೇ ಏಕೆ ರಿಯಲ್ ಲೈಫಿನಲ್ಲೂ ಕೂಡಾ ಒಂದು ಮಾತು ಕೇಳ್ತಾನೇ ಇರ್ತೇವೆ. ಯಾವುದಾದರೂ ಹೆಣ್ಣಿನ ಮೇಲೆ ಅತ್ಯಾಚಾರವಾಯಿತು ಎಂದೊಡನೆ ಹೇಳುವ ಕಾಮನ್ ಡೈಲಾಗ್ ಶೀಲ ಹೋಯ್ತು, ಕನ್ಯತ್ವ ಹೋಯ್ತು ಅನ್ನೋದು. ಆದರೆ, ಮುಂದಿನ ವಾರ ರಿಲೀಸ್ ಆಗುತ್ತಿರುವ ರಂಗನಾಯಕಿ ಚಿತ್ರದ ದಿಟ್ಟ ವಾದವೇ ಬೇರೆ. ಇದುವರೆಗಿನ ಎಲ್ಲ ವಾದ, ನಂಬಿಕೆಗಳನ್ನೂ ನೀವಾಳಿಸಿ ಎಸೆಯುವ ದಿಟ್ಟ ವಾದ.

ಅತ್ಯಾಚಾರಕ್ಕೊಳಗಾದ ಹೆಣ್ಣು ಕೂಡಾ ಕನ್ಯೆಯೇ. ಆಕೆ ಅತ್ಯಾಚಾರವಾದ ಮೇಲೂ ವರ್ಜಿನ್. ಕನ್ಯತ್ವ ಎನ್ನುವುದು ಮನಸ್ಸು ಮತ್ತು ಭಾವನೆಗಳಿಗೆ ಸಂಬಂಧಪಟ್ಟಿದ್ದು ಎನ್ನುತ್ತದೆ ರಂಗನಾಯಕಿಯ ಪಾತ್ರ.

ಆದಿತಿ ಪ್ರಭುದೇವ ಮತ್ತು ಅವರ ತಂದೆಗೆ ಇಷ್ಟವಾಗಿದ್ದೇ ಈ ಸ್ಟ್ರಾಂಗ್ ಮೆಸೇಜ್. ಆದಿತಿಯ ತಂದೆಯಂತೂ ಈ ಪಾತ್ರ ಮಾಡು ಮಗಳೇ.. ಈ ಕಥೆಯಲ್ಲೊಂದು ಗಟ್ಟಿ ಮೆಸೇಜ್ ಇದೆ ಎಂದರಂತೆ. ದಯಾಳ್ ಪದ್ಮನಾಭನ್ ಇಡೀ ಚಿತ್ರವನ್ನು ಅಶ್ಲೀಲತೆಯ ಸೋಂಕಿಲ್ಲದೆ ತೋರಿಸಿದ್ದಾರೆ. ನನ್ನ ಪಾತ್ರವಂತೂ ಅದ್ಭುತವಾಗಿ ಮೂಡಿಬಂದಿದೆ. ಇದು ರೆಗ್ಯುಲರ್ ಸಿನಿಮಾ ಅಲ್ಲ ಎನ್ನುತ್ತಾರೆ ಆದಿತಿ.

ಎಸ್.ವಿ.ನಾರಾಯಣ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಮೊದಲ ಚಿತ್ರ ರಂಗನಾಯಕಿ. ಆರತಿ ಅಭಿನಯಿಸಿದ್ದ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಆ ರಂಗನಾಯಕಿ ಚಿತ್ರಕ್ಕೂ, ದಯಾಳ್ ನಿರ್ದೇಶನದ ಈ ರಂಗನಾಯಕಿ ಚಿತ್ರಕ್ಕೂ ಕಿಂಚಿತ್ತೂ ಸಂಬಂಧವಿಲ್ಲ. ಹೆಸರಿನ ಹೊರತಾಗಿ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery