ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ಚಿತ್ರದ ಶೂಟಿಂಗ್ ಮುಕ್ತಾಯವಾಗಿದೆ. ಈ ವರ್ಷದ ಕೊನೆಯಲ್ಲೇ ಒಡೆಯನ ದರ್ಶನವಾದರೂ ಆಗಬಹುದು. ಸಂದೇಶ್ ನಾಗರಾಜ್ ನಿರ್ಮಾಣದ ಚಿತ್ರವಿದು. ಸ್ವಿಟ್ಜರ್‍ಲ್ಯಾಂಡ್‍ನಲ್ಲಿ ಹಾಡುಗಳ ಚಿತ್ರೀಕರಣ ಮುಗಿಸುವುದರೊಂದಿಗೆ ಚಿತ್ರೀಕರಣ ಮುಗಿಸಿದೆ ಒಡೆಯ ಸಿನಿಮಾ.
ದರ್ಶನ್ ಎದುರು ಕೊಡವರ ಚೆಲುವೆ ರಾಘವಿ ತಿಮ್ಮಯ್ಯ ನಾಯಕಿ. ಎಂ.ಡಿ.ಶ್ರೀಧರ್ ನಿರ್ದೇಶನದ ಚಿತ್ರಕ್ಕೆ ಹರಿಕೃಷ್ಣ ಮತ್ತು ಅರ್ಜುನ್ ಜನ್ಯ ಇಬ್ಬರೂ ಒಟ್ಟಿಗೇ ಮ್ಯೂಸಿಕ್ ಕೊಡುತ್ತಿದ್ದಾರೆ.