ಕನ್ನಡದಲ್ಲಿ ಅಧ್ಯಕ್ಷ ಇನ್ ಅಮೆರಿಕ ನಿರ್ಮಾಣ ಮಾಡಿ ಮೊದಲ ಪ್ರಯತ್ನದಲ್ಲೇ ಭರ್ಜರಿ ಸಕ್ಸಸ್ ಕಂಡ ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆ, ಈಗ ಚಿರಂಜೀವಿ ಸರ್ಜಾ ಚಿತ್ರದ ನಿರ್ಮಾಣಕ್ಕೆ ಕೈ ಹಾಕಿದೆ. ಚಿರಂಜೀವಿ ಸರ್ಜಾ, ಶೃತಿ ಹರಿಹರನ್ ಹಾಗೂ ನಿರ್ದೇಶಕ ಚೈತನ್ಯ ಕಾಂಬಿನೇಷನ್ನಿನ ಅದ್ಯ ಸಿನಿಮಾ ಕೈಗೆತ್ತಿಕೊಂಡಿದೆ ಪೀಪಲ್ ಮೀಡಿಯಾ ಫ್ಯಾಕ್ಟರಿ.
ಇದೊಂದು ಥ್ರಿಲ್ಲರ್ ಜಾನರ್ ಸ್ಟೋರಿ. ಹಾಗೆ ನೋಡಿದರೆ ಅಮ್ಮ ಐ ಲವ್ ಯು ಚಿತ್ರಕ್ಕೂ ಮೊದಲೇ ಶುರುವಾದ ಚಿತ್ರವಿದು. ಅನಂತರ ಚಿರು ಡೇಟ್ಸ್ ಕ್ಲಾಷ್ ಆಯ್ತು. ಚಿರು ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿಬಿಟ್ಟರು. ಈಗ ಮತ್ತೆ ಸಿನಿಮಾ ಟೇಕಾಫ್ ಆಗಿದೆ. ಈ ಚಿತ್ರದಲ್ಲಿ ಚಿರಂಜೀವಿ ಸರ್ಜಾ, ಬೇರೆಯದೇ ಶೇಡ್ನಲ್ಲಿ ಕಾಣಿಸಿಕೊಳ್ತಾರೆ ಎನ್ನುತ್ತಾರೆ ಚೈತನ್ಯ.
ಇದು ಚಿರಂಜೀವಿ ಸರ್ಜಾಗಿಂತಲೂ ಶೃತಿ ಹರಿಹರನ್ ಅವರಿಗೆ ದೊಡ್ಡ ಚಾಲೆಂಜಿಂಗ್ ಕ್ಯಾರೆಕ್ಟರ್ ಅಂತೆ. ಶೃತಿ ಕನ್ನಡದ ಅತ್ಯುತ್ತಮ ನಟಿಯರಲ್ಲಿ ಒಬ್ಬರು. ಈ ಪಾತ್ರಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನುವ ಚೈತನ್ಯ, ಆದ್ಯ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.