` ಸಲ್ಮಾನ್ ಕನ್ನಡಕ್ಕೆ ಕನ್ನಡಿಗರ ದಬಾಂಗ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
dabanng 3 kannada trailer
Sudeep Image From Dabanng 3

ದಬಾಂಗ್ 3 ಕನ್ನಡದಲ್ಲೂ ಬರುತ್ತಿದೆ. ಚಿರಂಜೀವಿ ಅಭಿನಯದ ಸೈರಾ ಕನ್ನಡ ಚಿತ್ರಕ್ಕೆ ಸಿಕ್ಕ ಸ್ವಾಗತವೇ ದಬಾಂಗ್ 3 ಕನ್ನಡಕ್ಕೂ ಸಿಗುವ ಸಾಧ್ಯತೆ, ನಿರೀಕ್ಷೆ ಇದೆ. ಹೀಗಾಗಿಯೇ ದಬಾಂಗ್ 3 ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದೇ ತಡ.. ಎಲ್ಲರೂ ಥ್ರಿಲ್ ಆಗಿದ್ದಾರೆ.

ದಬಾಂಗ್ 3ಯಲ್ಲಿ ಸಲ್ಮಾನ್ ಖಾನ್ ಎದುರು ವಿಲನ್ ಆಗಿ ನಟಿಸಿರುವುದು ಕಿಚ್ಚ ಸುದೀಪ್. ಎಂದಿನಂತೆ ಚುಲ್ ಬುಲ್ ಕಾಮಿಡಿ ಸ್ಟೈಲ್ ಈ ಚಿತ್ರದಲ್ಲೂ ಇರಲಿದೆ. ಪ್ರಭುದೇವ ಡೈರೆಕ್ಷನ್ ಇರೋ ಕಾರಣಕ್ಕೆ ಹಾಡುಗಳೂ ಹಬ್ಬ ಸೃಷ್ಟಿಸಲಿವೆ. ಒನ್ಸ್ ಎಗೇಯ್ನ್ ಇಲ್ಲಿಯೂ ಸೋನಾಕ್ಷಿ ಸಿನ್ಹಾ ಹೀರೋಯಿನ್. ಅಂದಹಾಗೆ ಸುದೀಪ್ ಈ ಚಿತ್ರದಲ್ಲಿ ಹೀರೋಯಿನ್ ಮೇಲೇ ಕಣ್ಣು ಹಾಕೋ ವಿಲನ್ ಆಗಿದ್ದಾರಾ..? ಉತ್ತರ ಬೇಕಾದರೆ ಡಿಸೆಂಬರ್ 20ರವರೆಗೆ ವೇಯ್ಟ್ ಮಾಡಿ. ರಿಲೀಸ್ ಆಗುತ್ತೆ.