ಆಪರೇಷನ್ ಅಲಮೇಲಮ್ಮ, ಕವಲುದಾರಿ ಖ್ಯಾತಿಯ ರಿಷಿ ವಿವಾಹವಾಗುತ್ತಿದ್ದಾರೆ ಎನ್ನುವುದು ಗುಟ್ಟಾಗಿಯೇನೂ ಇರಲಿಲ್ಲ. ಈಗ ಡೇಟ್ ಫಿಕ್ಸ್ ಆಗಿದೆ. ರಿಷಿ, ಸ್ವಾತಿ ಎಂಬುವವರನ್ನು ಮದುವೆಯಾಗುತ್ತಿದ್ದು, ನವೆಂಬರ್ 10ರಂದು ಚೆನ್ನೈನಲ್ಲಿ ಮದುವೆ. ನವೆಂಬರ್ 20ಕ್ಕೆ ಬೆಂಗಳೂರಿನಲ್ಲಿ ರಿಸೆಪ್ಷನ್.
ಸ್ವಾತಿ, ಕೇರಳದ ಪಾಲಕ್ಕಾಡ್‍ನವರು. ರಂಗಭೂಮಿಯಲ್ಲಿ ಪರಿಚಯವಾಗಿ, ಅದು ಪ್ರೇಮವಾಗಿ.. ಈಗ ವಿವಾಹವಾಗುತ್ತಿದ್ದಾರೆ. ಸ್ವಾತಿ, ಕಂಟೆಂಟ್ ರೈಟರ್. ಮದುವೆ ಇಬ್ಬರ ಮನೆಯ ಸಂಪ್ರದಾಯದಂತೆ ನಡೆಯುತ್ತಿದೆ. ಮದುವೆಗೆ ತಮ್ಮ ಆಪ್ತರು ಹಾಗೂ ಸ್ಯಾಂಡಲ್‍ವುಡ್ ಗಣ್ಯರನ್ನು ಆಹ್ವಾನಿಸಿದ್ದಾರೆ ರಿಷಿ.