` ಪಿ.ವಾಸು ಬೇಸರಕ್ಕೆ ಕಾರಣವಾಯ್ತು ರಚಿತಾ ರಾಮ್ ಆಡಿದ ಆ ಮಾತು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
p vasu upset over rachita ram's words
P Vasu, Rachita Ram

ಡಿಂಪಲ್ ಕ್ವೀನ್ ರಚಿತಾ ರಾಮ್ ಇತ್ತೀಚೆಗ್ಯಾಕೋ ಪದೇ ಪದೇ  ವಿವಾದಗಳಿಗೆ ಸಿಲುಕುತ್ತಿದ್ದಾರೆ. ಈ ಬಾರಿ ರಚಿತಾ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವುದು ಹಿರಿಯ ನಿರ್ದೇಶಕ ಪಿ.ವಾಸು. ಆಯುಷ್ಮಾನ್ ಚಿತ್ರದ ಸುದ್ದಿಗೋಷ್ಟಿ ವೇಳೆ ರಚಿತಾ ರಾಮ್ ಆಡಿದ್ದ ಅ ಒಂದು ಮಾತಿಗೆ ಪಿ.ವಾಸು ಅಸಮಾಧಾನ ಹೊರಹಾಕಿದ್ದಾರೆ.

ಕೆಟ್ಟದ್ದಕ್ಕೂ.. ಒಳ್ಳೆಯದ್ದಕ್ಕೂ ನಾನೇ ಕಾರಣವಂತೆ. ಇದೆಲ್ಲ ಹೇಗೆ ಹೇಳೋಕೆ ಸಾಧ್ಯ..? ರಚಿತಾ ರಾಮ್ ಅವರಿಂದ ಇಂತಹ ಮಾತನ್ನು ನಾನು ನಿರೀಕ್ಷೆ ಮಾಡಿರಲಿಲ್ಲ ಎಂದಿದ್ದಾರೆ ವಾಸು. ಇಷ್ಟೆಲ್ಲ ಆಗಿಯೂ ಚಿತ್ರದಲ್ಲಿ ರಚಿತಾ ಒಳ್ಳೆಯ ಅಭಿನಯ ನೀಡಿದ್ದಾರೆ ಅನ್ನೋದನ್ನು ಮರೆಯೋದಿಲ್ಲ. ಪ್ರೇಕ್ಷಕರು ರಚಿತಾ ಅವರನ್ನು ಖಂಡಿತಾ ಮೆಚ್ಚಿಕೊಳ್ತಾರೆ ಎಂದಿದ್ದಾರೆ ವಾಸು.

ಪಿ.ವಾಸು ಅವರ ಜೊತೆ ರಚಿತಾ ರಾಮ್ ಅವರಿಗೆ ಇದು ಮೊದಲ ಚಿತ್ರ. ಶಿವಣ್ಣ ಹೀರೋ ಆಗಿರುವ ಚಿತ್ರವಿದು. ದ್ವಾರಕೀಶ್ ಬ್ಯಾನರ್‍ಗೆ 50 ವರ್ಷ ತುಂಬಿರುವ ಈ ಹೊತ್ತಿನಲ್ಲಿ ಅವರ ಬ್ಯಾನರ್‍ನ 52ನೇ ಸಿನಿಮಾ ತೆರೆಗೆ ಬರುತ್ತಿದೆ. ನವೆಂಬರ್ 1ರಂದು ರಿಲೀಸ್ ಆಗುತ್ತಿದೆ ಆಯುಷ್ಮಾನ್ ಭವ.

#

Ayushmanbhava Movie Gallery

Damayanthi Audio and Trailer Launch Gallery