ಬೆಳದಿಂಗಳ ಬಾಲೆ ಸುಮನ್ ನಗರ್‍ಕರ್ ನಟಿಸಿ, ನಿರ್ಮಾಣವನ್ನೂ ಮಾಡಿರುವ ಚಿತ್ರ ಬಬ್ರೂ. ಚಿತ್ರದಲ್ಲಿ ಬಬ್ರೂ ಅನ್ನೋದು ಒಂದು ಕಾರಿನ ಹೆಸರು. ಇಡೀ ಚಿತ್ರ ನಡೆಯೋದು ಕಾರು ಮತ್ತು ಜರ್ನಿಯಲ್ಲಿ. ಇಷ್ಟಕ್ಕೂ ಕಾರಿಗೆ ಆ ಟೈಟಲ್ ಇಡೋಕೆ ಕಾರಣ ಏನು..? ಬಭ್ರುವಾಹನ ಸಿನಿಮಾ.
ಅಣ್ಣಾವ್ರ ಹಲವಾರು ಕ್ಲಾಸಿಕ್ ಸಿನಿಮಾಗಳಲ್ಲಿ ಒಂದಾಗಿರುವ ಬಭ್ರುವಾಹನ ಚಿತ್ರವೇ ಬಬ್ರೂ ಅನ್ನೋ ಟೈಟಲ್ ಇಡೋಕೆ ಕಾರಣವಂತೆ. ಚಿತ್ರದ ಟ್ರೇಲರ್ ರಿಲೀಸ್ ವೇಳೆ ಸ್ವತಃ ಸುಮನ್ ನಗರ್‍ಕರ್ ಈ ವಿಷಯ ಹೇಳಿಕೊಂಡಿದ್ದಾರೆ.
ರಾಕಿಂಗ್ ಸ್ಟಾರ್ ಯಶ್, ಬಬ್ರೂ ಚಿತ್ರದ ಟ್ರೇಲರ್ ರಿಲೀಸ್ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ರು. ಸುಜಯ್ ರಾಮಯ್ಯ ನಿರ್ದೇಶನವಿರುವ ಚಿತ್ರ ಸಂಪೂರ್ಣ ಅಮೆರಿಕ, ಕೆನಡಾದಲ್ಲಿಯೇ ಶೂಟಿಂಗ್ ಆಗಿದೆ.