` ಫ್ಯಾಮಿಲಿ ಸ್ಟಾರ್ ಶ್ರೀಮುರಳಿ ಭರಾಟೆ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
sriimurali is a fmaily entertainer
Srimurali Image From Bharaate

ಭರಾಟೆ, ಶ್ರೀಮುರಳಿ ಅಭಿನಯದ ಸಿನಿಮಾ. ನಿರ್ದೇಶಕ ಚೇತನ್ ಪ್ರಕಾರ, ಈ ಚಿತ್ರದಲ್ಲಿ ಕಾಣಿಸೋದು ಫ್ಯಾಮಿಲಿ ಎಂಟರ್‍ಟೈನರ್ ಶ್ರೀಮುರಳಿ. ಅದಕ್ಕೆ ಅವರು ಕಾರಣವನ್ನೂ ಕೊಡ್ತಾರೆ. ಚಂದ್ರಚಕೋರಿ, ಕಂಠಿ ಚಿತ್ರಗಳಲ್ಲಿ ಶ್ರೀಮುರಳಿ ಅವರದ್ದು ಕಂಟೆಂಟ್ ಓರಿಯಂಟೆಡ್ ಪಾತ್ರ. ಉಗ್ರಂ, ರಥಾವರ, ಮಫ್ತಿ ಚಿತ್ರಗಳಲ್ಲಿ ಕಂಪ್ಲೀಟ್ ರಗಡ್ ಲುಕ್. ಹೀಗಾಗಿ ಶ್ರೀಮುರಳಿಗೆ ಮಾಸ್ ಮತ್ತು ಕ್ಲಾಸ್ ಎರಡೂ ವರ್ಗದ ಆಡಿಯನ್ಸ್ ಇದ್ದಾರೆ. ಭರಾಟೆಯಲ್ಲಿ ಆ ಎರಡು ವರ್ಗದವರೂ ಎಂಜಾಯ್ ಮಾಡ್ತಾರೆ ಎಂದಿದ್ದಾರೆ ಚೇತನ್.

ಶ್ರೀಮುರಳಿ ಈ ಚಿತ್ರದಲ್ಲಿ ನಗುತ್ತಾ.. ನಗಿಸುತ್ತಾ.. ಥ್ರಿಲ್ ಕೊಡುತ್ತಾ. ಕೊನೆ ಕೊನೆಗೆ ಕಣ್ಣೀರನ್ನೂ ಹರಿಸ್ತಾರೆ ಎಂದಿದ್ದಾರೆ ಚೇತನ್. ಶ್ರೀಮುರಳಿಗೆ ಶ್ರೀಲೀಲಾ ಜೋಡಿಯಾಗಿದ್ದರೆ, ಸುಪ್ರೀತ್ ನಿರ್ಮಾಣ ಮಾಡಿದ್ದಾರೆ.

#

Ayushmanbhava Movie Gallery

Damayanthi Audio and Trailer Launch Gallery