` ನಿರ್ದೇಶಕ, ನಿರ್ಮಾಪಕರಿಗೆ ಶ್ರೀಮುರಳಿ ಕೊಟ್ಟ ಸರ್ಟಿಫಿಕೇಟ್ ಏನು..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
srimurali applauds bharaate movie director and producer
Srimurali

ಭರಾಟೆ ರಿಲೀಸ್ ಆಗಿರುವ ಹೊತ್ತಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿಯಿಂದ ಮೆಚ್ಚುಗೆಯ ಸರ್ಟಿಫಿಕೇಟ್ ಪಡೆದಿರುವುದು ಚಿತ್ರದ ನಿರ್ದೇಶಕ ಚೇತನ್ ಕುಮಾರ್ ಮತ್ತು ನಿರ್ಮಾಪಕ ಸುಪ್ರೀತ್. ಚೇತನ್ ಅವರಲ್ಲಿ ಶ್ರೀಮುರಳಿಗೆ ಇಷ್ಟವಾಗಿದ್ದು ಅವರ ಡಿಸಿಪ್ಲಿನ್. ಚೇತನ್ ಟೀಕೆ, ಸಲಹೆ, ವಿಮರ್ಶೆ ಎಲ್ಲದಕ್ಕೂ ಓಪನ್ ಆಗ್ತಾರೆ. ನಟರಿಗೆ ಕಂಫರ್ಟ್ ಝೋನ್ ಕಲ್ಪಿಸಿಕೊಡ್ತಾರೆ. ಅಷ್ಟೇ ಅಲ್ಲ, ಔಟ್ ಪುಟ್ ವಿಚಾರಕ್ಕೆ ರಾಜಿಯಾಗಲ್ಲ. ಎಲ್ಲ ನಿರ್ದೇಶಕರಿಗೂ ಇಂತಹ ಗುಣಗಳಿರಬೇಕು ಎನ್ನುವ ಶ್ರೀಮುರಳಿ, ನಿರ್ಮಾಪಕರಿಗೆ ಕೊಟ್ಟಿರುವ ಪ್ರಮಾಣ ಪತ್ರವೇ ಬೇರೆ.

`ನಾನು ಇದುವರೆಗೆ ಕೆಲಸ ಮಾಡಿರುವ ಪ್ರೊಡಕ್ಷನ್ ಸಂಸ್ಥೆಗಳಲ್ಲಿ ಇದು ನಂ.1. ದಿ ಬೆಸ್ಟ್. ನಿರ್ಮಾಪಕ ಸುಪ್ರೀತ್ ಅವರ ನಂಬಿಕೆ, ಆತ್ಮವಿಶ್ವಾಸ ಹಾಗೂ ಧೈರ್ಯ ಇಷ್ಟವಾಯ್ತು ಎಂದಿದ್ದಾರೆ ಶ್ರೀಮುರಳಿ.

ಎಲ್ಲರಂತೆಯೇ ಶ್ರೀಮುರಳಿ ಹೇಳಿರೋದು ಅದೇ ಮಾತು. ರಿಲೀಸ್ ಆಗುವವರೆಗೆ ಅದು ನಮ್ಮ ಸಿನಿಮಾ. ರಿಲೀಸ್ ಆದ ಮೇಲೆ ಅದು ಪ್ರೇಕ್ಷಕರ ಸಿನಿಮಾ. ಜನರೇ ಡಿಸೈಡ್ ಮಾಡಬೇಕು.

#

Ayushmanbhava Movie Gallery

Damayanthi Audio and Trailer Launch Gallery