` ರಾಜ್ಯೋತ್ಸವಕ್ಕೆ ರಂಗನಾಯಕಿ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ranganayak for rajyotsava
Ranganayaki Movie Image

ದಯಾಳ್ ಪದ್ಮನಾಭನ್ ನಿರ್ದೇಶನದ ಹೊಸ ಸಿನಿಮಾ ರಂಗನಾಯಕಿ. ಇದೇ ನವೆಂಬರ್ 1ಕ್ಕೆ ತೆರೆ ಮೇಲೆ ಬರುತ್ತಿದೆ. ಈಗಾಗಲೇ ಭಾರತೀಯ ಪನೋರಮಾಗೆ ಆಯ್ಕೆಯಾಗಿ ಮೊದಲ ಮೆಚ್ಚುಗೆ ಗಳಿಸಿರುವ ಚಿತ್ರವಿದು. ಅಂದಹಾಗೆ ಇದು ಕಾದಂಬರಿ ಆಧರಿತ ಸಿನಿಮಾ. ದಯಾಳ್ ಅವರು ಮೊದಲು ಕಾದಂಬರಿ ಬರೆದು, ನಂತರ ಅದನ್ನೇ ಸಿನಿಮಾ ರೂಪಕ್ಕಿಳಿಸಿದ್ದಾರೆ.

ದೆಹಲಿಯಲ್ಲಿ ನಡೆದ ನಿರ್ಭಯಾ ಪ್ರಕರಣವೇ ಚಿತ್ರದ ಕಥೆಗೆ ಸ್ಫೂರ್ತಿ. ಅಕಸ್ಮಾತ್ ನಿರ್ಭಯಾ ಆ ದುರಂತದ ನಂತರ ಬದುಕಿದ್ದರೆ, ನ್ಯಾಯಕ್ಕಾಗಿ ಹೋರಾಡುವ ಮನಸ್ಸು ಮಾಡಿದ್ದರೆ ಆಕೆ ಏನೇನೆಲ್ಲ ಸವಾಲು ಎದುರಿಸಬೇಕಾಗಿತ್ತು ಎನ್ನುವುದರ ಸುತ್ತವೇ ಚಿತ್ರದ ಕಥೆ ಇದೆ ಎನ್ನುತ್ತಾಳೆ ದಯಾಳ್.

ಶ್ಯಾನೆ ಟಾಪಾಗವ್ಳೆ ಹಾಡಿನ ಮೂಲಕ ಕರ್ನಾಟಕದ ಮನೆ ಮಾತಾದ ಆದಿತಿ ಪ್ರಭುದೇವ ಈ ಚಿತ್ರದಲ್ಲಿ ಮೆಚ್ಯೂರ್ಡ್ ಲುಕ್‍ನಲ್ಲಿ ಗಮನ ಸೆಳೆಯುತ್ತಿದ್ದಾರೆ. ಎಸ್.ವಿ. ನಾರಾಯಣ್ ಚಿತ್ರದ ನಿರ್ಮಾಪಕ. ಶ್ರೀನಿ, ತ್ರಿವಿಕ್ರಮ್ ಚಿತ್ರದ ಮುಖ್ಯ ತಾರಾಬಳಗದಲ್ಲಿದ್ದಾರೆ.

#

Ayushmanbhava Movie Gallery

Damayanthi Audio and Trailer Launch Gallery