` ವಿವಾದಗಳಲ್ಲಿ ಪುನೀತ್ ಇರಲ್ಲ - ಪುನೀತ್ ಹೇಳಿದ ಕಾರಣ ಇದು - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
puneeth rajkumar reacts on controversy matter
Puneeth Rajkumar

ಸ್ಯಾಂಡಲ್ ವುಡ್‍ನಲ್ಲಿ ಇತ್ತೀಚೆಗೆ ವಿವಾದಗಳಿಗೆ ಕೊನೆಯೇ ಇಲ್ಲ. ನಟರು ಸುಮ್ಮನಿದ್ದರೂ ಅಭಿಮಾನಿಗಳು ಸುಮ್ಮನಿರಲ್ಲ. ಆದರೆ ಇವೆಲ್ಲದಕ್ಕಿಂತ ಡಿಫರೆಂಟ್ ಆಗಿರೋದು ಪುನೀತ್ ರಾಜ್‍ಕುಮಾರ್. ಅವರು ಇದುವರೆಗೆ ಯಾವುದೇ ವಿವಾದಕ್ಕೆ ಸಿಕ್ಕವರಲ್ಲ. ವಿವಾದಗಳಾಗಬಹುದಾದ ವಿಚಾರಗಳನ್ನೂ ಅಷ್ಟೇ ಸಲೀಸಾಗಿ ಸೈಡಿಗೆ ತಳ್ಳಿ ಕೂಲ್ ಮಾಡುವ ವ್ಯಕ್ತಿತ್ವ ಅವರದ್ದು.

ವಿವಾದಗಳೇ ಇಲ್ಲದೆ ಎಲ್ಲವನ್ನೂ ನಿಭಾಯಿಸುವುದು ಹೇಗೆ ಅನ್ನೋ ಪ್ರಶ್ನೆಯನ್ನು ಕನ್ನಡದ ಕೋಟ್ಯಧಿಪತಿಯಲ್ಲಿ ಹಾಟ್ ಸೀಟ್‍ನಲ್ಲಿ ಕುಳಿತಿದ್ದ ಪ್ರದೀಪ್ ಎಂಬುವರು ಕೇಳಿದ್ದಾರೆ. ಅದಕ್ಕೆ ಪುನೀತ್ ಕೊಟ್ಟಿರುವ ಉತ್ತರ ಇದು.

``ನಾನು ಹುಟ್ಟಿದಾಗಿನಿಂದ ಜನರ ಪ್ರೀತಿ ನೋಡಿದ್ದೇನೆ. ತಂದೆಯವರಿಂದ ಶುರುವಾದ ಪ್ರೀತಿ, ಈಗಲೂ ಹಾಗೆಯೇ ಇದೆ. 50 ವರ್ಷಗಳಿಂದ ಜನ ನಮ್ಮನ್ನು ಪ್ರೀತಿ, ವಿಶ್ವಾಸಗಳಿಂದ ಬೆಳೆಸಿದ್ದಾರೆ. ಜನರ ಪ್ರೀತಿಯೇ ಅಷ್ಟೊಂದು ಇರುವಾಗ ವಿವಾದಗಳು ಏಕೆ ಬೇಕು. ವಿವಾದ ನಮಗೆ ಬೇಡದೇ ಇರುವಂಥದ್ದು'' ಎಂಬ ಉತ್ತರ ಕೊಟ್ಟಿದ್ದಾರೆ ಪುನೀತ್.

#

Ayushmanbhava Movie Gallery

Damayanthi Audio and Trailer Launch Gallery