ಕೋಟಿಗೊಬ್ಬ 3 ಚಿತ್ರಕ್ಕೆ ಪೋಲೆಂಡ್‍ನಲ್ಲಿ ತಗ್ಲಾಕ್ಕೊಂಡ ವಂಚಕನೊಬ್ಬ ಯಾಮಾರಿಸಿದ್ದ. ಇಡೀ ತಂಡ ವಾಪಸ್ ಆದರೂ ನಿರ್ಮಾಪಕ ಸೂರಪ್ಪ ಬಾಬು ಅವರ ಅಸಿಸ್ಟೆಂಟ್ ಅವರ ಪಾಸ್‍ಪೋರ್ಟ್ ಕಿತ್ತಿಟ್ಟುಕೊಂಡು 95 ಲಕ್ಷ ರೂ. ಕೊಡಲೇಬೇಕು ಎಂದು ಬ್ಲಾಕ್‍ಮೇಲ್ ಮಾಡಿದ್ದ. ಒಪ್ಪಂದದ ಪ್ರಕಾರ ಕೊಡಬೇಕಿದ್ದ 2 ಕೋಟಿ 36 ಲಕ್ಷ ಕೊಟ್ಟ ಮೇಲೂ ಹೊಸದಾಗಿ 95 ಲಕ್ಷಕ್ಕೆ ಡಿಮ್ಯಾಂಡ್ ಇಟ್ಟು ಹಿಂಸೆ ಕೊಟ್ಟಿದ್ದ.
ಇಡೀ ತಂಡವನ್ನು ವಾಪಸ್ ಕರೆದುಕೊಂಡು ಬಂದ ಸೂರಪ್ಪ ಬಾಬು, ನಂತರ ಜಗ್ಗೇಶ್ ಅವರನ್ನು ಸಂಪರ್ಕಿಸಿದ್ದಾರೆ. ಜಗ್ಗೇಶ್ ನೆರವಿನೊಂದಿಗೆ ಕೇಂದ್ರ ಸಚಿವ ಸದಾನಂದ ಗೌಡರನ್ನು ಸಂಪರ್ಕಿಸಿದ್ದಾರೆ. ಯಾವಾಗ ಕೇಂದ್ರ ಸಚಿವರ ಕರೆ ಬಂತೋ ಮುಂಬೈ ಪೊಲೀಸರು ಖದೀಮನಿಗೆ ನೋಟಿಸ್ ಕೊಟ್ಟಿದ್ದಾರೆ. ಇತ್ತ ಬೆಂಗಳೂರಿನಲ್ಲೂ ಕೇಸ್ ದಾಖಲಾಗಿದೆ. ತಕ್ಷಣ ಹೆದರಿದ ಪೋಲೆಂಡ್‍ನಲ್ಲಿದ್ದ ಅಜಯ್ ಪಾಲ್ ಮತ್ತು ಸಂಜಯ್ ಪಾಲ್, ಸೂರಪ್ಪ ಬಾಬು ಅವರ ಅಸಿಸ್ಟೆಂಟ್‍ರನ್ನು ಕಳಿಸಿಕೊಟ್ಟಿದ್ದಾರೆ.
ಈಗ ನೋಡಿದರೆ ಲೆಕ್ಕದ ಪ್ರಕಾರ ಏಜೆನ್ಸಿಯವರೇ ನಮಗೆ ಹಣ ಕೊಡಬೇಕಿದೆ. ಅವರಿಬ್ಬರು ಮೆಡಿಕಲ್ ಮಾಫಿಯಾದಲ್ಲೂ ಇದ್ದಂತಹ ವ್ಯಕ್ತಿಗಳು. ತಿಂಗಳಿಗೊಂದು ಕಂಪೆನಿ ಆರಂಭಿಸಿ ವಂಚಿಸುವುದೇ ಅವರ ಕಾಯಕ. ಇವರ ವಿರುದ್ಧ ಹೋರಾಟ ಮುಂದುವರಿಯುತ್ತೆ ಎಂದಿದ್ದಾರೆ ಸೂರಪ್ಪ ಬಾಬು.