ಅಧ್ಯಕ್ಷ ಇನ್ ಅಮೆರಿಕ ಟೀಂ ಈಗ ಡಬಲ್ ಖುಷಿಯಲ್ಲಿದೆ. ರಿಲೀಸ್ ಆದ ನಂತರ ಇಡೀ ತಂಡ ಮತ್ತೊಮ್ಮೆ ಸೇರಿ ಸಕ್ಸಸ್ ಪಾರ್ಟಿ ಮಾಡಿದೆ. ಕಾರಣ ಸಿಂಪಲ್, ಅಧ್ಯಕ್ಷ ಇನ್ ಅಮೆರಿಕ ಚಿತ್ರಕ್ಕೆ ಸತತ 2ನೇ ವಾರವೂ ಸಿಗುತ್ತಿರುವ ಹೌಸ್ಫುಲ್ ಪ್ರತಿಕ್ರಿಯೆ ಮತ್ತು ವಿದೇಶದಲ್ಲಿ ಸಿಕ್ಕಿರುವ ಭರಪೂರ ರೆಸ್ಪಾನ್ಸ್.
ಪೀಪಲ್ಸ್ ಫ್ಯಾಕ್ಟರಿ ಬ್ಯಾನರ್ನಲ್ಲಿ ಇದು ಮೊದಲ ಸಿನಿಮಾ. ಮೊದಲ ಚಿತ್ರವೇ ಸಕ್ಸಸ್ ಆಗಿರೋದು ಇನ್ನಷ್ಟು ಚಿತ್ರಗಳನ್ನು ನಿರ್ಮಿಸೋಕೆ ಸ್ಫೂರ್ತಿ ಕೊಟ್ಟಿದೆ ಎನ್ನುತ್ತಿದ್ದಾರೆ ನಿರ್ಮಾಪಕ ವಿಶ್ವಪ್ರಸಾದ್.
ನಿರ್ದೇಶಕ ಯೋಗಾನಂದ್ ಮುದ್ದಾನ್ ಅವರಿಗೆ ಅಮೆರಿಕದಿಂದ ಮುಂದಿನ ಸಿನಿಮಾಗೆ ಕ್ರೌಡ್ ಫಂಡಿಂಗ್ ಮಾಡಲು ಮುಂದೆ ಬಂದಿದ್ದಾರಂತೆ. ಶರಣ್, ರಾಗಿಣಿ ಮೊದಲ ಬಾರಿಗೆ ಜೋಡಿಯಾಗಿ ನಟಿಸಿದ್ದ ಚಿತ್ರ ಮಾರ್ಕೆಟ್ಟಿನಲ್ಲಿ ಸಖತ್ ಸದ್ದು ಮಾಡ್ತಿದೆ.