ಮೊದಲ ಚಿತ್ರದ ನಂತರ ಇವರನ್ನು ಪ್ರೇಕ್ಷಕರು ಗುರುತಿಸಿದ್ದು ಬಹದ್ದೂರ್ ಚೇತನ್ ಅಂತಾ. ಅದಾದ ಮೇಲೆ ಭರ್ಜರಿ ಬಂತು. ಭರ್ಜರಿ ಚೇತನ್ ಆದರು. ಈಗ ಭರಾಟೆ ಬರುತ್ತಿದೆ. ಪ್ರೇಕ್ಷಕರು ಆಗಲೇ ಭರಾಟೆ ಚೇತನ್ ಎನ್ನುತ್ತಿದ್ದಾರೆ. ಇತ್ತೀಚೆಗೆ ಕನ್ನಡ ಚಿತ್ರರಂಗಕ್ಕೆ ಬಂದ ಹೊಸಬರಲ್ಲಿ ಅಪ್ಪಟ ಕಮರ್ಷಿಯಲ್ ಡೈರೆಕ್ಟರ್ ಆಗಿ ಹೊರಹೊಮ್ಮಿದವರು ಚೇತನ್ ಕುಮಾರ್.
ಇಷ್ಟಕ್ಕೂ ಚೇತನ್ ಅವರ ಸ್ಫೂರ್ತಿ ಯಾರು ಎಂದರೆ, ಅವರು ಈ ನಾಲ್ಕು ಹೆಸರು ಹೇಳ್ತಾರೆ. ಡಾ.ರಾಜ್ಕುಮಾರ್,
ಪುಟ್ಟಣ್ಣ ಕಣಗಾಲ್, ತ್ರಿವಿಕ್ರಂ ಶ್ರೀನಿವಾಸ್ ಮತ್ತು ರೋಹಿತ್ ಶೆಟ್ಟಿ. ಈ ನಾಲ್ವರ ವಿಶೇಷವೇನು ಗೊತ್ತೇ.. ಇವರು ಒಳ್ಳೊಳ್ಳೆಯ ಸಿನಿಮಾಗಳನ್ನು ಕಮರ್ಷಿಯಲ್ ಚೌಕಟ್ಟಿನಲ್ಲಿಯೇ ಕೊಟ್ಟು ಗೆದ್ದವರು.
ಹಾಡು ಮತ್ತು ಡೈಲಾಗ್ ನನ್ನ ಶಕ್ತಿ. ನನ್ನ ಚಿತ್ರದ ಕಥೆಗಳು ಕಮರ್ಷಿಯಲ್ ಆಗಿಯೇ ಇರುತ್ತವೆ. ಆದರೆ, ನನ್ನ ಇಡೀ ಚಿತ್ರವನ್ನು ಕ್ಯಾರಿ ಮಾಡುವುದು ಎಮೋಷನ್ಸ್ ಎನ್ನುತ್ತಾರೆ ಚೇತನ್. ಅಂದಹಾಗೆ ಸುಪ್ರೀತ್ ನಿರ್ಮಾಣದ ಭರಾಟೆ ರಿಲೀಸ್ ಆಗುವ ಮೊದಲೇ ಲಾಭದಲ್ಲಿದೆ. ಶ್ರೀಮುರಳಿ, ಶ್ರೀಲೀಲಾ ಜೋಡಿಯಾಗಿರೋ ಚಿತ್ರದಲ್ಲಿ ಸಾಯಿಕುಮಾರ್ ಬ್ರದರ್ಸ್ ವಿಲನ್ ಆಗಿರುವುದು ವಿಶೇಷ.