ಅಜೇಯ್ ರಾವ್ ಅಭಿನಯದ ಕೃಷ್ಣ ಟಾಕೀಸ್ ಚಿತ್ರದ ಒಂದು ಟೀಸರ್ ಹೊರಬಿದ್ದಿದೆ. ಈ ಬಾರಿ ಕೃಷ್ಣ ಸಿರೀಸ್‍ನಲ್ಲಿ ಅಜೇಯ್ ರಾವ್ ಹೇಳೋಕೆ ಹೊರಟಿರೋದು ಒಂದು ಸಸ್ಪೆನ್ಸ್ ಥ್ರಿಲ್ಲರ್ ಸ್ಟೋರಿ. ಯಾವುದೋ ಕೊಲೆ, ಇನ್ಯಾವುದೋ ನಿಗೂಢ ಜಗತ್ತಿನ ಬೆನ್ನು ಹತ್ತಿ ಹೋಗುವ ಕೃಷ್ಣ ಕೊನೆಗೆ ಎಲ್ಲಿಗೆ ಮುಟ್ತಾನೆ ಅನ್ನೋದೇ ಕಥೆ. ಟೀಸರ್ ಕುತೂಹಲ ಹುಟ್ಟಿಸುವಲ್ಲಿ ಗೆದ್ದಿದೆ.
ಅಜೇಯ್ ರಾವ್ ಜೊತೆ ಸಿಂಧು ಲೋಕನಾಥ್, ಅಪೂರ್ವ ನಟಿಸಿದ್ದಾರೆ. ವಿಜಯ್ ಆನಂದ್ ನಿರ್ದೇಶನದ ಚಿತ್ರಕ್ಕೆ ಗೋವಿಂದರಾಜು ಅಲೂರು ನಿರ್ಮಾಪಕ.