ಬ್ರಹ್ಮಚಾರಿ 100% ವರ್ಜಿನ್ ಚಿತ್ರ ರಿಲೀಸ್ ಆಗುವ ಸಮಯ ಹತ್ತಿರವಾಗುತ್ತಿದ್ದಂತೆ. ಚಿತ್ರದ ಒಂದು ಲಿರಿಕಲ್ ವಿಡಿಯೋ ಬಿಡುಗಡೆಗೆ ಚಿತ್ರತಂಡ ಮುಂದಡಿಯಿಟ್ಟಿದೆ. ಹಿಡ್ಕ ಹಿಡ್ಕ ವಸಿ ಹಿಡ್ಕ ಹಿಡ್ಕ.. ತಡ್ಕ ತಡ್ಕ ವಸಿ ತಡ್ಕ ತಡ್ಕ.. ಹಾಡು. ನೀನಾಸಂ ಸತೀಶ್ ಮತ್ತು ಆದಿತಿ ಪ್ರಭುದೇವ ಹೆಜ್ಜೆ ಹಾಕಿರುವ ಅರ್ಧಪೋಲಿ ಗೀತೆ ಎನ್ನುವ ಸುಳಿವು ಇದೆ.
ಧರ್ಮ ವಿಶ್ ಅವರಿಗೆ ಇದು ಕೂಡಾ ತಮ್ಮ ಶ್ಯಾನೆ ಟಾಪಾಗವ್ಳೆ ಶೈಲಿಯಲ್ಲಿ ಹಿಟ್ ಆಗತ್ತೆ ಅನ್ನೋ ನಂಬಿಕೆಯಿದೆ. ಮುರಳಿ ಮಾಸ್ಟರ್ ಕೊರಿಯೋಗ್ರಫಿ ಇದೆ. ಅವರ ಜೊತೆ ನಾನು ಮಾಡಿದ ಹಾಡುಗಳೆಲ್ಲ ಹಿಟ್ ಎಂದು ನೆನಪಿಸಿಕೊಳ್ತಾರೆ ಸತೀಶ್.
ಡ್ರಾಮಾ ಚಿತ್ರದ ತುಂಡೈಕ್ಳ ಸಾವಾಸ, ಲೂಸಿಯಾದ ಜುಮ್ಮ ಜುಮ್ಮ, ಲವ್ ಇನ್ ಮಂಡ್ಯದ ಎಲ್ಲ ಹಾಡು, ಅಯೋಗ್ಯ ಚಿತ್ರದ ಇಂಟ್ರೊಡಕ್ಷನ್ ಸಾಂಗ್.. ಹೀಗೆ ಎಲ್ಲ ಹಾಡುಗಳೂ ಹಿಟ್. ಇದೂ ಹಿಟ್ ಆಗಲಿದೆ ಎನ್ನುವುದು ಸತೀಶ್ ನಂಬಿಕೆ.
ಭರಾಟೆ ಚಿತ್ರ ರಿಲೀಸ್ ಆಗುವ ದಿನ ಅಕ್ಟೋಬರ್ 18ರಂದು ಅದೇ ಚಿತ್ರದ ನಿರ್ದೇಶಕ ಚೇತನ್ ಬರೆದಿರುವ ಈ ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಆಗುತ್ತಿದೆ. ಇದು ಬರಹಗಾರನಿಗೆ ನಿರ್ಮಾಪಕ ಉದಯ್ ಕೆ. ಮೆಹ್ತಾ, ನಿರ್ದೇಶಕ ಚಂದ್ರಮೋಹನ್ ನೀಡುತ್ತಿರುವ ಕೊಡುಗೆ ಎನ್ನಬಹುದು.