ಸ್ಯಾಂಡಲ್‍ವುಡ್ ಕ್ವೀನ್ ಎಂದೇ ಹೆಸರಾಗಿದ್ದ ರಮ್ಯಾ ಮತ್ತೆ ಚಿತ್ರರಂಗಕ್ಕೆ ವಾಪಸ್ ಬಂದ್ರಾ..? ರಾಜಕೀಯದಿಂದ ನೇಪಥ್ಯಕ್ಕೆ ಸರಿದಂತೆ ಕಾಣುತ್ತಿರುವ ರಮ್ಯಾ ಮತ್ತೆ ಸಿನಿಮಾಗಳ ಕಡೆಗೆ ಮುಖ ಮಾಡಿದ್ರಾ..? ಇಂಥಾದ್ದೊಂದು ಕುತೂಹಲ ಮೂಡೋಕೆ ಕಾರಣವಾಗಿರೋದು ದಿಲ್ ಕಾ ರಾಜಾ ಸಿನಿಮಾ.
ದಿಲ್ ಕಾ ರಾಜಾ ರಮ್ಯಾ ನಟಿಸಿರುವ ಕೊನೆಯ ಸಿನಿಮಾ. ವಿಶೇಷ ಅಂದ್ರೆ, ಆ ಚಿತ್ರದ ಶೂಟಿಂಗ್ ಇನ್ನೂ ಮುಗಿಯುವ ಮೊದಲೇ ರಮ್ಯಾ ಚಿತ್ರದಿಂದ ಹೊರನಡೆದಿದ್ದರು. ಪ್ರಜ್ವಲ್ ದೇವರಾಜ್ ಹೀರೋ ಆಗಿದ್ದ ಸಿನಿಮಾ ಅಲ್ಲಿಗೇ ನಿಂತು ಹೋಗಿತ್ತು. ಈಗ ಇದ್ದಕ್ಕಿದ್ದಂತೆ ಆ ಚಿತ್ರದ ಸುದ್ದಿ ಹೊರಬಿದ್ದಿದೆ. ಚಿತ್ರದ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಗೆ ಸಿದ್ಧತೆ ನಡೆಯುತ್ತಿದೆಯಂತೆ.
ಹಾಗಾದರೆ ರಮ್ಯಾ ವಾಪಸ್ ಬಂದ್ರಾ..? ವರ್ಷಗಳ ಹಿಂದೆ ನಿಂತು ಹೋಗಿದ್ದ ಸಿನಿಮಾ ಮತ್ತೆ ಶುರುವಾಗುತ್ತಾ.? ಹಾಗೆ ಶುರುವಾಗೋ ಚಿತ್ರದಲ್ಲಿ ರಮ್ಯಾ ಇರ್ತಾರಾ..? ಪ್ರಶ್ನೆಗಳಿಗೆ ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.