ಭರಾಟೆ ಚಿತ್ರದಲ್ಲಿ ಹೀರೋ ಶ್ರೀಮುರಳಿ, ಹೀರೋಯಿನ್ ಶ್ರೀಲೀಲಾ, ಸಾಯಿಕುಮಾರ್, ರವಿಶಂಕರ್, ಅಯ್ಯಪ್ಪ, ತಾರಾ, ಅವಿನಾಶ್, ಶರತ್ ಲೋಹಿತಾಶ್ವ, ನೀನಾಸಂ ಅಶ್ವತ್ಥ್, ಪೆಟ್ರೋಲ್ ಪ್ರಸನ್ನ.. ಇದ್ದಾರೆ. ಭರ್ಜರಿ ಚೇತನ್ ನಿರ್ದೇಶಕ. ರಚಿತಾ ರಾಮ್ ಅತಿಥಿ ನಟಿಯಾಗಿ ಮಿಂಚು ಹರಿಸಲಿದ್ದಾರೆ. ಇದೆಲ್ಲದರ ಮಧ್ಯೆ ಅತೀ ದೊಡ್ಡ ಸಸ್ಪೆನ್ಸ್ ಒಂದು ಇದೆ.
ಚಿತ್ರದಲ್ಲಿ ಕನ್ನಡದ ಇನ್ನೊಬ್ಬ ಸ್ಟಾರ್ ನಟ ನಟಿಸಿದ್ದಾರೆ. ಅವರು ತೆರೆ ಮೇಲೆ ಬಂದಾಗ ಪ್ರತಿಯೊಬ್ಬರೂ ಎದ್ದುನಿಂತು ನಮಸ್ಕಾರ ಮಾಡಬೇಕು ಎನ್ನುವಂತಿದೆ. ಹಾಗಿದೆಯಂತೆ ಆ ಪಾತ್ರ. ಅವರಷ್ಟೆ ಅಲ್ಲ, ಒಟ್ಟು ಐವರು ಪಾತ್ರಧಾರಿಗಳು ಸಸ್ಪೆನ್ಸ್ ಎಂಟ್ರಿ ಕೊಡಲಿದ್ದಾರೆ ಎಂದು ಭಯಂಕರ ಸಸ್ಪೆನ್ಸ್ ಹೇಳಿದ್ದಾರೆ ನಿರ್ದೇಶಕ ಚೇತನ್.
ಅಂದಹಾಗೆ ಆ ದೊಡ್ಡ ನಟ ತೆರೆ ಮೇಲೆ ಬಂದಾಗ ಇಡೀ ಚಿತ್ರಮಂದಿರಕ್ಕೇ ಒಂದು ದೈವಿಕ ಕಳೆ ಬರುತ್ತದೆಯಂತೆ. ಯಾರು ಆ ನಟ.. ಗೆಸ್ ಮಾಡಿ. ಇನ್ನೂ 3 ದಿನ ಟೈಂ ಇದೆ.