ಯಶಸ್ವಿಯಾಗಿ 25ನೇ ದಿನದತ್ತ ಮುನ್ನುಗ್ಗುತ್ತಿರುವ ಚಿತ್ರ ಕಿಸ್. ನೀನೇ ಮೊದಲು ನೀನೇ ಕೊನೆ ಹಾಡಿನ ಮೂಲಕ ಕ್ರೇಜ್ ಹುಟ್ಟಿಸಿದ್ದ ಚಿತ್ರ, ಯುವ ಪ್ರೇಮಿಗಳ ಎದೆಯಲ್ಲಿ ಝೇಂಕಾರ ಮೊಳಗಿಸಿದೆ. ಎ.ಪಿ.ಅರ್ಜುನ್ ನಿರ್ದೇಶನದ ಚಿತ್ರವನ್ನು ರಾಕಿಂಗ್ ಸ್ಟಾರ್ ಯಶ್, ಅಭಿಮಾನಿಗಳ ಜೊತೆಯಲ್ಲಿ ನೋಡಿ ಮೆಚ್ಚಿಕೊಂಡಿದ್ದಾರೆ.
ಇದು ಹುಡುಗ ಹುಡುಗೀರ ಚಿತ್ರವಷ್ಟೇ ಅಲ್ಲ, ಪ್ರತಿ ಮನೆಯ ಹಿರಿಯರೂ ನೋಡಬೇಕಾದ ಚಿತ್ರ ಎಂದಿದ್ದಾರೆ ಯಶ್. ಇದೊಂದು ಟ್ರೆಂಡ್ ಸೆಟ್ಟಿಂಗ್ ಲವ್ ಸ್ಟೋರಿ ಎಂದು ಶ್ರೀಲೀಲಾ, ವಿರಾಟ್ ಬೆನ್ನು ತಟ್ಟಿದ್ದಾರೆ.