ಖ್ಯಾತ ಸಿನಿಮಾ ಸಾಹಿತಿ ಕವಿರಾಜ್ ಅವರ ತಂದೆ ನಿಧನರಾಗಿದ್ದಾರೆ. ಸಮಾಜವಾದಿ ಹೋರಾಟಗಾರರೂ ಆಗಿದ್ದ ಹರಿಯಪ್ಪ ನಾಯ್ಕ ಹಲವು ತಿಂಗಳಿಂದ ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಹರಿಯಪ್ಪ ಅವರಿಗೆ 65 ವರ್ಷ ವಯಸ್ಸಾಗಿತ್ತು.
ಬಂಗಾರಪ್ಪ ಅವರ ಶಿಷ್ಯರಾಗಿದ್ದ ಹರಿಯಪ್ಪ ನಾಯ್ಕ, ಸಮಾಜವಾದಿ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದರು. ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಭಿಮಾನಿಗಳನ್ನು ಅವರು ಅಗಲಿದ್ದಾರೆ. ಮಂಡಗದ್ದೆ ಬಳಿಯ ಇರುವತ್ತಿಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಈ ದಿನವೇ ಅಂತ್ಯ ಸಂಸ್ಕಾರ ನೆರವೇರಲಿದೆ.