` ರಶ್ಮಿಕಾ ಜೊತೆ ಅದೇನೇನ್ ಮಾತಾಡವ್ರೆ ಧ್ರುವಾ - chitraloka.com | Kannada Movie News, Reviews | Image

User Rating: 1 / 5

Star activeStar inactiveStar inactiveStar inactiveStar inactive
 
pogaru dialogue trailer on oct 24th
Pogaru Movie Image

ನಂದಕಿಶೋರ್ ನಿರ್ದೇಶನದಲ್ಲಿ ಧ್ರುವ ಸರ್ಜಾ, ರಶ್ಮಿಕಾ ನಟಿಸಲಿದ್ದಾರೆ ಎಂದಾಗಲೇ ಕುತೂಹಲ ಹುಟ್ಟಿತ್ತು. ಈಗ ಆ ಕುತೂಹಲದ ಇನ್ನೊಂದು ಮಜಲು ತೋರಿಸಲಿದ್ದಾರೆ ನಂದಕಿಶೋರ್. ಅಕ್ಟೋಬರ್ 24ಕ್ಕೆ ಪೊಗರು ಚಿತ್ರದ ಡೈಲಾಗ್ ಟ್ರೇಲರ್ ಹೊರಬೀಳಲಿದೆ. ಇನ್ನೊಂದ್ಸಲ ಓದಿಕೊಳ್ಳಿ, ಇದು ಡೈಲಾಗ್ ಟ್ರೇಲರ್ ಮಾತ್ರ. ಕಥೆಯ ಸಣ್ಣದೊಂದು ಗುಟ್ಟನ್ನೂ ಬಿಡಲ್ಲ.

ಇನ್ನೂ ಈ ಡೈಲಾಗ್ ಟ್ರೇಲರ್‍ನಲ್ಲಿ ಧ್ರುವ ಮತ್ತು ರಶ್ಮಿಕಾ ಮಂದಣ್ಣ ನಡುವಣ ಸಂಭಾಷಣೆಗಳಷ್ಟೇ ಇರಲಿವೆ. ಅಂದರೆ.. ಪ್ರೇಮದ ಪೊಗರಿನ ಡೈಲಾಗ್ಸ್ ಎಂದರ್ಥ ಮಾಡಿಕೊಳ್ಳಿ. ಅದ್ಧೂರಿ, ಬಹದ್ದೂರ್, ಭರ್ಜರಿ ಚಿತ್ರಗಳಲ್ಲಿ ಡೈಲಾಗ್‍ಗಳ ಮೂಲಕವೇ ಶಿಳ್ಳೆಯ ಕಾಣಿಕೆ ಪಡೆದಿದ್ದ ಧ್ರುವಾ, ಇಲ್ಲಿಯೂ ಅದನ್ನು ಕಂಟಿನ್ಯೂ ಮಾಡಿದ್ದಾರೆ.